ಮಂಗಳೂರು: ನಗರದ ಬೈಕಂಪಾಡಿ ಮೀನಕಳಿಯಕ್ಕೆ ಹೋಗುವ ರಸ್ತೆ ಬದಿಯಲ್ಲಿ ರಾಜ ಯಾನೆ ರಾಘವೇಂದ್ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮೈಕಲ್ ನವೀನ್ ಎಂದು ಗುರುತಿಸಲಾಗಿದೆ.
ನವೀನ್ ಇತರ 8 ಮಂದಿ ಆರೋಪಿಗಳೊಂದಿಗೆ ಸೇರಿಕೊಂಡು ಮಾರಕಾಯುಧಗಳಿಂದ ಗಂಭೀರವಾಗಿ ಹಲ್ಲೆ ಮಾಡಿ ರಾಘವೇಂದ್ರನನ್ನು ಕೊಲೆ ಮಾಡಿದ್ದ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನವೀನ್ ಕೊಲೆಯ ಸಂಚನ್ನು ರೂಪಿಸಿದ್ದ, ಕೊಲೆ ಪ್ರಕರಣದ ರೂವಾರಿ, ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.