ಬೆಂಕಿ ನಂದಿಸುವ ವೇಳೆ ಕಟ್ಟಡ ಕುಸಿದು ಬಿದ್ದು ಅಗ್ನಿಶಾಮಕ ಸಿಬ್ಬಂದಿ ಮೃತ್ಯು

Prasthutha|

ತಿರುವನಂತಪುರಂ: ಔಷಧ ಸಂಗ್ರಹ ಕೇಂದ್ರವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ನಂದಿಸುವ ವೇಳೆ ಕಟ್ಟಡ ಕುಸಿದು ಬಿದ್ದು ಅಗ್ನಿಶಾಮಕ ಸಿಬ್ಬಂದಿಯೊಬ್ಬರು ಮೃತಪಟ್ಟ ದಾರುಣ ಘಟನೆ ಕೇರಳದಲ್ಲಿ ನಡೆದಿದೆ.

- Advertisement -

ಕೇರಳದ ರಾಜಧಾನಿ ತಿರುವನಂತಪುರಂ ಜಿಲ್ಲೆಯ ತುಂಬ ಕಿನ್‌ಫ್ರಾ ಪಾರ್ಕ್‌ನಲ್ಲಿರುವ ವೈದ್ಯಕೀಯ ಸೇವಾ ನಿಗಮದ ಔಷಧ ಸಂಗ್ರಹ ಕೇಂದ್ರದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಬೆಂಕಿ ನಂದಿಸಲು ಹರ ಸಾಹಸ ಪಡುತ್ತಿದ್ದ ವೇಳೆ ಚಾಕ್ಕ ಅಗ್ನಿಶಾಮಕ ದಳದ ಅಗ್ನಿಶಾಮಕ ಸಿಬ್ಬಂದಿ ಆಟ್ಟಿಂಗಲ್ ಮೂಲದ ಜೆ.ಎಸ್.ರಂಜಿತ್ (32) ಮೃತಪಟ್ಟಿದ್ದಾರೆ.

ಬೆಂಕಿ ನಂದಿಸುವ ವೇಳೆ ಕಟ್ಟಡದ ಒಂದು ಭಾಗ ರಂಜಿತ್ ಅವರ ದೇಹದ ಮೇಲೆ ಬಿದ್ದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ. ರಂಜಿತ್ ಕಳೆದ ಆರು ವರ್ಷಗಳಿಂದ ಅಗ್ನಿಶಾಮಕ ದಳದ ಉದ್ಯೋಗಿಯಾಗಿದ್ದಾರೆ.
ಮೆಡಿಕಲ್ ಸರ್ವಿಸಸ್ ಕಾರ್ಪೊರೇಷನ್ ಔಷಧಿ ಸಂಗ್ರಹ ಕೇಂದ್ರದಲ್ಲಿ ಸೋಮವಾರ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ರಾತ್ರಿ 1.30ರ ಸುಮಾರಿಗೆ ರಾಸಾಯನಿಕಗಳನ್ನು ಸಂಗ್ರಹಿಸಿಟ್ಟಿದ್ದ ಕಟ್ಟಡ ಭಾರೀ ಶಬ್ದದೊಂದಿಗೆ ಸ್ಫೋಟಗೊಂಡಿದ್ದು, ಕಟ್ಟಡ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

- Advertisement -

ಅಗ್ನಿ ಅವಘಡದ ವೇಳೆ ಭದ್ರತಾ ಸಿಬ್ಬಂದಿ ಮಾತ್ರ ಇದ್ದರು. ನಂತರ ಘಟನೆಯ ಬಗ್ಗೆ ಮಾಹಿತಿ ಪಡೆದು ಧಾವಿಸಿ ಬಂದ ಅಗ್ನಿಶಾಮಕ ದಳ ಬೆಂಕಿ ನಂದಿಸಲು ಹರಸಾಹಸ ಪಟ್ಟಿತ್ತು.

Join Whatsapp