ವೀರಪ್ಪ ಮೊಯಿಲಿಯನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲು ಆಗ್ರಹಿಸಿದ ಆರ್. ಅಶೋಕ್

Prasthutha|

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ವ್ಯಂಗ್ಯವಾಗಿ ಮಾತನಾಡಿದ್ದಾರೆ ಎಂದ ವಿಪಕ್ಷ ನಾಯಕ ಆರ್.ಅಶೋಕ್, ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸುವಂತೆ ಆಗ್ರಹಿಸಿದ್ದಾರೆ.

- Advertisement -

ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುಳಿದ ಜಾತಿಗೆ ಸೇರಿದವರು ಅನ್ನುವ ಕಾರಣಕ್ಕೆ ನಿಂದನೆ ಮಾಡುತ್ತೀರಲ್ಲಾ ಕಾಂಗ್ರೆಸ್ ನಾಯಕರೇ… ಇದೇನಾ ನಿಮ್ಮ ಜಾತ್ಯತೀತತೆ ಎಂದು ಅಶೋಕ್ X ಮೂಲಕ‌ ಪ್ರಶ್ನಿಸಿದ್ದಾರೆ.

ಇದೇನಾ ನಿಮ್ಮ ಸಮಾಜವಾದ? ಇದೇನಾ ನಿಮ್ಮ ಸಾಮಾಜಿಕ ನ್ಯಾಯ? ಇದೇನಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ನೀವು ಕೊಡುವ ಗೌರವ? ಎಂದು ಪ್ರಶ್ನೆಗಳ ಮೂಲಕ ವಿಪಕ್ಷ ನಾಯಕ ಕಿಡಿಗಾರಿದ್ದಾರೆ.

- Advertisement -

ಮಾಜಿ ಕೇಂದ್ರ ಸಚಿವ, ಮಾಜಿ ಸಿಎಂ ವೀರಪ್ಪ ಮೊಯಿಲಿ ಅವರು ಪ್ರಧಾನಿ ಮೋದಿ ಅವರಿಗೆ ಈ ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು, ಇಲ್ಲವಾದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮೊಯ್ಲಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.



Join Whatsapp