ರಾಹುಲ್ ಗಾಂಧಿ ಜೊತೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪಿ ಫೋಟೋ ಹಂಚಿದ R ಅಶೋಕ್

Prasthutha|

ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ಮತ್ತು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಜೊತೆಯಲ್ಲಿರುವ ಫೋಟೋವನ್ನು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಬಿಡುಗಡೆಗೊಳಿಸಿದ್ದಾರೆ. ದೆಹಲಿ ಮೂಲದ ಮೊಹಮ್ಮದ್ ಇಲ್ತಾಜ್ ಮತ್ತು ರಾಹುಲ್ ಗಾಂಧಿ ಜೊತೆಯಲ್ಲಿರುವ ಮೂರು ಫೋಟೋಗಳನ್ನು ಆರ್ ಡಿಸಿಎಂ ಅಶೋಕ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿ ಡಿಕೆ ಶಿವಕುಮಾರ್ ಅವರನ್ನು ಪ್ರಶ್ನೆ ಮಾಡಿದ್ದಾರೆ.

- Advertisement -

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಶಂಕಿತ ಮೊಹಮ್ಮದ್ ಇಲ್ತಾಝ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅಪ್ತನಾಗಿದ್ದು, ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ನಡೆದಾಗ ಕೂಡ ರಾಹುಲ್ ಗಾಂಧಿ ಅವರ ಜೊತೆ ಪಾಲ್ಗೊಂಡಿದ್ದ.

ಈ ಗಂಭೀರ ಪ್ರಕರಣದ ತನಿಖೆ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಈ ದೋಸ್ತಿಯೇ ಕಾರಣಾನಾ? ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಕರ್ನಾಟಕದ ಜನತೆಗೆ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

- Advertisement -

ಬಿಜೆಪಿ ಕಾರ್ಯಕರ್ತನ ಬಂಧನದ ಬಗ್ಗೆ ಮೌನ:

ಮಂಡ್ಯದಲ್ಲಿ ಪಾಕ್ ಪರ ಘೋಷಣೆ ವಿವಾದ ಸಂಬಂಧ 2 ವರ್ಷಗಳ ಹಿಂದಿನ ಕೇಸ್‌ಗೆ ಮರುಜೀವ ಬಂದಿದೆ.. ಬಿಜೆಪಿ ಕಾರ್ಯಕರ್ತನನ್ನ ಇದೀಗ ಪೊಲೀಸರು ಬಂಧಿಸಿದ್ದರ ಬಗ್ಗೆ ಅಶೋಕ್ ಪ್ರಸ್ತಾಪಿಸದಿರುವುದಕ್ಕೆ ನೆಟ್ಟಿಗರು ಆಕ್ಷೇಪಿದ್ದಾರೆ.



Join Whatsapp