ಮಡಿಕೇರಿ: ನಾಪೋಕ್ಲುವಿನ ರಾಫಲ್ಸ್ ಇಂಡ ಇಂಟರ್ ನ್ಯಾಷನಲ್ ಪದವಿ ಪೂರ್ವ ಕಾಲೇಜು ಮುರ್ನಾಡ್ ಹಾಗೂ ನಾಪೋಕ್ಲು ವಿಭಾಗದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಹಾಗೂ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಮುಖ್ಯ ಅಥಿತಿಗಳಾಗಿ ಆಗಮಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ ಕೇಶವ್ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಕಳೆದ ಎರಡು ವರ್ಷಗಳಿಂದ ಯಾವುದೇ ಪಠ್ಯೇತರ ಚಟುವಟಿಕೆಗಳು ನಡೆಯದೆ ಅವರಲ್ಲಿ ಯಾವುದಕ್ಕೂ ಅಸಶಕ್ತಿಯಿಲ್ಲದಾಗಿದೆ. ಆದ್ದರಿಂದ ಇಂಹತ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಹುಮ್ಮಸನ್ನು ನೀಡಲಿದ್ದು, ವಿದ್ಯಾರ್ಥಿಗಳ ಸರ್ವತ್ತೋಮುಖ ಬೆಳವಣಿಗೆಗೆ ಪ್ರೇರೆಣೆಯಾಗಲಿ ಹಾಗೂ ಇಂತಹ ಕಾರ್ಯಕ್ರಮವಗಳು ಹೆಚ್ಚು ಹೆಚ್ಚು ಕಡೆ ಆಯೋಜಿಸುವಂತಾಗಲಿ ಎಂದು ಹೇಳಿದರು.
ವಿದ್ಯಾರ್ಥಿಗಳು ಪ್ರತಿನಿತ್ಯ ದಿನ ಪತ್ರಿಕೆಯನ್ನು ಓದುವುದರ ಮೂಲಕ ತಮ್ಮ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳುವಂತಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಮಾತನಾಡಿದ ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಮೆಹಬೂಬ್ ಸಾಬ್ರವರು ವಿದ್ಯಾರ್ಥಿಗಳ ಪ್ರತಿಬೆಯನ್ನು ಮೊಬೈಲ್ ಗಳನ್ನು ಹೋಗಾಲಾಡಿಸಿ ಅವರಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಗಳಲ್ಲಿ ಆಸಕ್ತಿ ಹೆಚ್ಚಿಸಲು ಇನ್ನೂ ಮುಂದೆ ಕೂಡ ಇಂತಹ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದರು. ರಸಪ್ರಶ್ನೆ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಶುಪಾಲರಾದ ತನ್ವೀರ್ ನಡೆಸಿಕೊಸಿಕೊಟ್ಟರು.
ಇನ್ನೂ ರಸಪ್ರಶ್ನೆ ಸ್ಪರ್ಧೆಯಲ್ಲಿ ಶ್ರೀ ರಾಮಾ ಟ್ರೆಸ್ಟ್ ಪ್ರೌಢ ಶಾಲೆಯ ಆರ್ಯನ್ ಅಯ್ಯಪ್ಪ ಹಾಗೂ ಇಶಾನ್ ಮುತ್ತಣ್ಣ ಪ್ರಥಮ ಸ್ಥಾನವನ್ನು ಜ್ಞಾನಜೋಶಿ ಪ್ರೌಢ ಶಾಲೆಯ ತನ್ವಿ ತಂಗಮ್ಮ ಹಾಗೂ ರೋಹಿತ್ ದ್ವಿತೀಯ ಸ್ಥಾನವನ್ನು, ಮಾರುತಿ ಪ್ರೌಢ ಶಾಲೆಯ ಚೇತನ್ ಗೌಡ ಹಾಗೂ ಪ್ರಕೃತಿ ತೃತೀಯ ಸ್ಥಾನವನ್ನು ಪಡೆದುಕೊಂಡರು.
ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆಯಲ್ಲಿ ಶ್ರೀ ರಾಮಾ ಟ್ರೆಸ್ಟ್ ಪ್ರೌಢ ಶಾಲೆಯ ಅಜಯ್ ಹಾಗೂ ಯಶಂತ್ ಪ್ರಥಮ ಸ್ಥಾನ, ಪೊನ್ನಣ್ಣ ಹಾಗೂ ಸಯ್ಯದ್ ಅಲಿ ದ್ವಿತೀಯ ಸ್ಥಾನವನ್ನು, ಜ್ಞಾನಜೋಶಿ ಪ್ರೌಢ ಶಾಲೆಯ ರೋಹನ್ ಹಾಗೂ ಆಶಿನ್ ಅಚಿಟನಿ ತೃತೀಯ ಸ್ಥಾನವನ್ನು ಗಳಿಸಿದರು.