ಭಾರತ ಸೇರಿದಂತೆ ಏಷ್ಯಾದ ದೇಶಗಳಿಗೆ ನೂತನ ಕೋವಿಡ್ ಮಾರ್ಗಸೂಚಿ ನಿಗದಿಪಡಿಸಿದ ಕತಾರ್

Prasthutha|

ದೋಹಾ, ಆಗಸ್ಟ್ 2: ಭಾರತ ಸೇರಿದಂತೆ ಏಷ್ಯಾದ ಆರು ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗಾಗಿ ಕತಾರ್ ಭಾನುವಾರ ನೂತನ ಪ್ರಯಾಣ ನೀತಿಯನ್ನು ಪ್ರಕಟಿಸಿದೆ.
ಆಗಸ್ಟ್ 2 ರಿಂದ ಭಾರತ, ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ, ಫಿಲಿಪೈನ್ ಮತ್ತು ಶ್ರೀಲಂಕಾ ದಿಂದ ಲಸಿಕೆ ಪಡೆದ ಅಥವಾ ಕೋವಿಡ್ ನಿಂದ ಚೇತರಿಸಿಕೊಂಡಿರುವ ಪ್ರಯಾಣಿಕರು ಹೊಟೇಲ್ ನಲ್ಲಿ ಎರಡು ದಿನಗಳ ಕ್ವಾರಂಟೈನ್ ನಂತರ ಕತಾರ್ ಪ್ರವೇಶಿಸಬಹುದು ಎಂದು ಕತಾರ್ ಆರೋಗ್ಯ ಸಚಿವಾಲಯ ತಿಳಿಸಿದೆ.

- Advertisement -


ಪ್ರಯಾಣಿಕರು ಕತಾರ್ ನಲ್ಲಿ ಲಸಿಕೆ ಪಡೆದಿರಬೇಕು ಅಥವಾ ಕೋವಿಡ್ ಪಿಸಿಆರ್ ಪರೀಕ್ಷೆ ನಡೆಸಿ ನೆಗೆಟಿವ್ ವರದಿ ಕಡ್ದಾಯವಾಗಿ ಹೊಂದಿರಬೇಕು. ಆದರೂ ಕತಾರ್ ಹೊಟೇಲ್ ನಲ್ಲಿ 2 ದಿನಗಳ ಕ್ವಾರಂಟೈನ್ ಕಡ್ಡಾಯವಾಗಲಿದೆ.
ಮಾತ್ರವಲ್ಲದೇ ಈ ದೇಶಗಳಿಂದ ಲಸಿಕೆ ಹಾಕಿಸದೆ ಆಗಮಿಸುವ ಪ್ರಯಾಣಿಕರು ಹತ್ತು ದಿನಗಳವರೆಗೆ ಹೊಟೇಲ್ ಕ್ವಾರಂಟೈನ್ ಕಡ್ಡಾಯವಾಗಲಿದೆಯೆಂದು ಸಚಿವಾಲಯ ಸ್ಪಷ್ಟಪಡಿಸಿದೆ. ಮಾತ್ರವಲ್ಲ ಸೋಂಕಿನ ಲಕ್ಷಣಗಳು ಗೋಚರಿಸುವ ಪ್ರಯಾಣಿಕರನ್ನು ಏರ್ ಪೋರ್ಟ್ ನಲ್ಲಿ ವೈದ್ಯಕೀಯ ತಂಡದ ಅಭಿಪ್ರಾಯ ಪಡೆದು ಅಗತ್ಯ ತಪಾಸಣೆ ಮಾಡಲಾಗುತ್ತದೆಯೆಂದು ಸಚಿವಾಲಯ ತಿಳಿಸಿದೆ.
ಕತಾರ್ ನಲ್ಲಿ ಭಾನುವಾರ 95 ಪಾಸಿಟಿವ್ ಪ್ರಕರಣ ಕಂಡುಬಂದಿದೆ. ಆದರೆ ಯಾವುದೇ ಸಾವು ವರದಿಯಾಗಿಲ್ಲ. ಲಸಿಕೆ ಅಭಿಯಾನದ ಪ್ರಾರಂಭದಿಂದ ಇದುವರೆಗೆ ಒಟ್ಟು 3,780,468 ಲಸಿಕಾ ಪ್ರಮಾಣ ದಾಖಲಾಗಿದೆಯೆಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ.

Join Whatsapp