ಟರ್ಕಿ, ಸಿರಿಯಾಕ್ಕೆ 10,000 ಮೊಬೈಲ್ ಹೌಸ್’ಗಳನ್ನು ಕಳುಹಿಸಿದ ಕತಾರ್

Prasthutha|

ದೋಹಾ: ಭೂಕಂಪನ ಬಾಧಿತ ಟರ್ಕಿ ಮತ್ತು ಸಿರಿಯಾದಲ್ಲಿ ಸಂತ್ರಸ್ತರಾಗಿರುವವರ ರಕ್ಷಣೆಗೆ ಮುಂದಾಗಿರುವ ಕತಾರ್ ದೇಶ, 10,000 ಮೊಬೈಲ್ ಮನೆಗಳನ್ನು ಕಳುಹಿಸುವುದಾಗಿ ಮಂಗಳವಾರ ತಿಳಿಸಿದೆ.

- Advertisement -

ಇದು “ಸಿರಿಯಾ ಮತ್ತು ಟರ್ಕಿಯಲ್ಲಿನ ಭೂಕಂಪನ ಪೀಡಿತ ಜನರಿಗೆ ಕೊಡುಗೆ ನೀಡುವ ಕತಾರ್ ಪ್ರಯತ್ನಗಳ ಒಂದು ಭಾಗವಾಗಿದೆ” ಎಂದು ಕತಾರ್ ವಿದೇಶಾಂಗ ಸಚಿವಾಲಯದ ತಿಳಿಸಿದೆ.

ಸೋಮವಾರ, ಕತಾರ್ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರು ಟರ್ಕಿಯಲ್ಲಿ ಭೂಕಂಪನ ಸಂತ್ರಸ್ತರಿಗೆ ಸಹಾಯ ಮಾಡಲು ಏರ್ ಲಿಫ್ಟ್ ಪ್ರಾರಂಭಿಸಲು ಆದೇಶಿಸಿದ್ದರು.

- Advertisement -

ರಕ್ಷಣಾ ತಂಡ, ಫೀಲ್ಡ್ ಆಸ್ಪತ್ರೆ, ಪರಿಹಾರ ಸಾಧನ, ಡೇರೆಗಳು ಮತ್ತು ಚಳಿಗಾಲದಲ್ಲಿ ಬಳಸುವ ವಸ್ತುಗಳನ್ನು ಸಹ ದೇಶಕ್ಕೆ ರವಾನಿಸಲಾಗುವುದು ಎಂದು ರಾಜ್ಯ ಸುದ್ದಿ ಸಂಸ್ಥೆ ಕ್ಯೂಎನ್’ಎ ತಿಳಿಸಿದೆ.

ದೇಶದ ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರಾಧಿಕಾರ (ಎಎಫ್ ಎಡಿ) ಪ್ರಕಾರ, ಸೋಮವಾರ ಮುಂಜಾನೆ ದಕ್ಷಿಣ ಟರ್ಕಿಯ ಕಹ್ರಮನ್ಮರಸ್ ಪ್ರಾಂತ್ಯದಲ್ಲಿ 7.7 ತೀವ್ರತೆಯ ಭೂಕಂಪ ಮತ್ತು ಮಧ್ಯಾಹ್ನ ಅದೇ ಪ್ರದೇಶದಲ್ಲಿ 7.6 ತೀವ್ರತೆಯ ಮತ್ತೊಂದು ಭೂಕಂಪನ ಸಂಭವಿಸಿದ್ದು, ಕನಿಷ್ಠ 7000ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಮತ್ತು 21,103 ಜನರು ಗಾಯಗೊಂಡಿದ್ದಾರೆ.

ಸಿರಿಯಾದಲ್ಲಿ, ಭೂಕಂಪಗಳಲ್ಲಿ ಸುಮಾರು 1,622 ಜನರು ಸಾವನ್ನಪ್ಪಿದ್ದಾರೆ ಮತ್ತು 3,649 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರ ಮತ್ತು ಪರಿಹಾರ ಅಧಿಕಾರಿಗಳು ವರದಿ ಮಾಡಿದ್ದಾರೆ.



Join Whatsapp