ಫೆಲೆಸ್ತೀನ್ ಗೆ 1 ಮಿಲಿಯನ್ ಡಾಲರ್ ತುರ್ತು ಸಹಾಯ ಘೋಷಿಸಿದ ಕತಾರ್

Prasthutha|

ದೋಹ : ಇಸ್ರೇಲ್ ನ ಕ್ರೂರ ದಾಳಿಗೆ ತುತ್ತಾಗಿರುವ ಫೆಲೆಸ್ತೀನ್ ಗೆ ಕತಾರ್ ನ ರೆಡ್ ಕ್ರೆಸೆಂಟ್ ಸೊಸೈಟಿ ಒಂದು ಮಿಲಿಯನ್ ಡಾಲರ್ ತುರ್ತು ಸಹಾಯವನ್ನು ನೀಡುವುದಾಗಿ ಘೋಷಿಸಿದೆ. ಮದ್ದು, ವೈದ್ಯಕೀಯ ಉತ್ಪನ್ನಗಳನ್ನು ತಲುಪಿಸಲು, ಆಂಬುಲೆನ್ಸ್, ಆಸ್ಪತ್ರೆ, ಮೆಡಿಕಲ್ ಉಪಕರಣಗಳು, ಕೊರೊನ ವೈರಸ್ ಪ್ರತಿರೋಧದ ವಸ್ತುಗಳು, ಆಹಾರ, ಆಹಾರೇತರ ಸಂಪನ್ಮೂಲಗಳು, ದಾಳಿಯಿಂದ ಧ್ವಂಸಗೊಂಡ ಮನೆಗಳ ರಿಪೇರಿ ಇತ್ಯಾದಿಗೆ ಈ ಹಣವನ್ನು ಅದು ಬಳಸಲಿದೆ.

- Advertisement -

ಜಾಗತಿಕವಾಗಿ ಅಟ್ಟಹಾಸ ಮೆರೆಯುತ್ತಿರುವ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಫೆಲಸ್ತೀನಿನ ಆರೋಗ್ಯ ಕ್ಷೇತ್ರ ತೀವ್ರ ಹದಗೆಟ್ಟಿದ್ದು,ಇದೀಗ ಇಸ್ರೇಲ್ ಸೇನೆಯ ದಾಳಿಯಿಂದಾಗಿ ಫೆಲೆಸ್ತೀನಿ ಜನತೆ ಕಂಗೆಟ್ಟು ಹೊಗಿದ್ದಾರೆ. ಫೆಲಸ್ತೀನಿಯರ ಜೀವನ ಮಟ್ಟ ಸಾಮಾನ್ಯ ನೆಲೆಗೆ ಬರುವಂತೆ ತುರ್ತು ರಿಲೀಫ್ ಅಭಿಯಾನ ಅರಂಭಿಸುವುದಾಗಿ ಕತಾರ್ ರೆಡ್‍ ಕ್ರೆಸೆಂಟ್ ಯೋಜನೆ ಹಾಕಿದೆ.

Join Whatsapp