ಕತಾರ್‌: ಭಾರತೀಯ ನೌಕಾಪಡೆ ಯೋಧರ ಗಲ್ಲು ಶಿಕ್ಷೆ ರದ್ದು!

Prasthutha|

ದೋಹಾ: 8 ಭಾರತೀಯ ಮಾಜಿ ನೌಕಾಪಡೆಯ ಯೋಧರ ಗಲ್ಲು ಶಿಕ್ಷೆ ರದ್ದಾಗಿದೆ ಎಂದು ವರದಿಯಾಗಿದೆ. ಅವರಿಗೆ ಮರಣದಂಡನೆಯ ಬದಲಿಗೆ ವಿಭಿನ್ನ ಅವಧಿಯ ಜೈಲು ಶಿಕ್ಷೆಯನ್ನು ನೀಡಲಾಗಿದೆ. ಕಡಿಮೆಯೆಂದರೆ ನಾವಿಕ ರಾಗೇಶ್‌ಗೆ ಮೂರು ವರ್ಷ ಜೈಲು ಮತ್ತು ಇತರೆ ಏಳು ಮಂದಿಗೆ 10 ವರ್ಷಗಳಿಂದ 25 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣದ ಸೂಕ್ಷ್ಮ ಸ್ವರೂಪದ ಕಾರಣ ಅದನ್ನು ಇನ್ನೂ ಸಾರ್ವಜನಿಕಗೊಳಿಸಲಾಗಿಲ್ಲ ಎಂದೂ ತಿಳಿದುಬಂದಿದೆ.

- Advertisement -

ಪ್ರಕರಣದ ಎಲ್ಲಾ ಎಂಟು ನೌಕಾಪಡೆ ಯೋಧರ ಪತ್ನಿಯರು ಕೆಲವು ಸಮಯದಿಂದ ದೋಹಾದಲ್ಲಿದ್ದಾರೆ. ಗುರುವಾರ ನಾಲ್ಕನೇ ವಿಚಾರಣೆ ನಡೆದಿತ್ತು. ಭಾರತೀಯ ರಾಯಭಾರಿ ವಿಪುಲ್ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಾಗಿದ್ದರು. ಹಿಂದಿನ ವಿಚಾರಣೆಗಳು ನವೆಂಬರ್ 23, ನವೆಂಬರ್ 30 ಮತ್ತು ಡಿಸೆಂಬರ್ 7 ರಂದು ನಡೆದಿತ್ತು.

ನೌಕಾಪಡೆಯ ಕಮಾಂಡರ್ಗಳಾದ ಪೂರ್ಣೇಂದು ತಿವಾರಿ, ಸುಗುಣಾಕರ್ ಪಾಕಲಾ, ಅಮಿತ್ ನಾಗ್ಪಾಲ್, ಸಂಜೀವ್ ಗುಪ್ತಾ ಮತ್ತು ಕ್ಯಾಪ್ಟನ್‌ಗಳಾದ ನವತೇಜ್ ಸಿಂಗ್ ಗಿಲ್, ಬೀರೇಂದ್ರ ಕುಮಾರ್ ವರ್ಮಾ ಮತ್ತು ಸೌರಭ್ ವಸಿಷ್ಟ್, ನಾವಿಕ ರಾಗೇಶ್ ಗೋಪಕುಮಾರ್ ಕತಾರ್‌ನಲ್ಲಿ ಬಂಧಿತ ಎಂಟು ಭಾರತೀಯ ನೌಕಾಪಡೆಯ ಸಿಬ್ಬಂದಿಯಾಗಿದ್ದಾರೆ.

Join Whatsapp