► ಮುಖ್ಯಮಂತ್ರಿಗಳ ಅಸಂಬದ್ಧ ಹೇಳಿಕೆಯೇ ಕರಾವಳಿಯ ಸ್ವಾಸ್ಥ್ಯ ಕದಡಲು ಕಾರಣ: ಅನೀಸ್ ಕೌಸರಿ
ಪುತ್ತೂರು: ಅನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸಿ ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಜ್ಯದ ಮುಖ್ಯಮಂತ್ರಿಗಳು ನೀಡಿರುವ ಅಸಂಬದ್ಧ ಹೇಳಿಕೆಯೇ ದಕ್ಷಿಣ ಕನ್ನಡ ಜಿಲ್ಲೆಯ ಸ್ವಾಸ್ಥ್ಯ ಕದಡಲು ಕಾರಣ ಎಂದು SKSSF ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ ಆರೋಪಿಸಿದ್ದಾರೆ.
ಇತ್ತೀಚೆಗೆ ಕಾಣಿಯೂರಿನಲ್ಲಿ ನಡೆದ ಬಟ್ಟೆ ವ್ಯಾಪಾರಿಗಳ ಮೇಲಿನ ಹಲ್ಲೆಯನ್ನು ಖಂಡಿಸಿ ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ತಿಂಗಳುಗಳ ಹಿಂದೆ ಕರಾವಳಿಯಲ್ಲಿ ನಡೆದ ಸರಣಿ ಕೊಲೆಗಳ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ತಳೆದ ತಾರತಮ್ಯ ಧೋರಣೆ, ಕ್ರಿಯೆಗೆ ಪ್ರತಿಕ್ರಿಯೆ ಎಂಬ ಹೇಳಿಕೆ, ಪ್ರಸಕ್ತ ನಡೆಯುತ್ತಿರುವ ದುಷ್ಕೃತ್ಯಗಳ ಬಗ್ಗೆ ಮೌನ ವಹಿಸುತ್ತಿರುವ ನಡೆ ಇವುಗಳೆಲ್ಲವೂ ಇಲ್ಲಿನ ಕೋಮುಕ್ರಿಮಿಗಳಿಗೆ ಅನುಕೂಲ ವಾತಾವರಣವನ್ನುಂಟು ಮಾಡಿದೆ ಎಂದು ಹೇಳಿದರು.
ವಾಗ್ಮಿ ರಫೀಯುದ್ದಿನ್ ಕುದ್ರೋಳಿ ಮಾತನಾಡಿ, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ತಾರತಮ್ಯ ನೀತಿಯನ್ನು ಖಂಡಿಸಿದರು.
ಪುತ್ತೂರು ತಾಲೂಕು ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಯಾಕೂಬ್ ಸಅದಿ ನಾವೂರು, ಜಿ.ಪಂ ಮಾಜಿ ಸದಸ್ಯ ಎಂ ಎಸ್ ಮುಹಮ್ಮದ್, ಸುಹೈಲ್ ಕಂದಕ್, ನ್ಯಾಯವಾದಿ ಹನೀಫ್ ಮಂಗಳೂರು, ಇಕ್ಬಾಲ್ ಎಲಿಮಲೆ, ಯು,ಕೆ. ಇಬ್ರಾಹಿಂ ಅಡ್ಡೂರು, ಬಿ.ಎ. ಶಕೂರ್ ಹಾಜಿ, ಶುಕೂರ್ ಹಾಜಿ, ಅರಿಯಡ್ಕ ಅಬ್ದುಲ್ ರಹಿಮಾನ್, ಎಲ್.ಟಿ. ರಝಾಕ್ ಹಾಜಿ, ಅಬ್ದುಲ್ ಖಾದರ್ ಹಾಜಿ ಸುರೈಯಾ ಮುಸ್ಲಿಂ ಯುವಜನ ಪರಿಷತ್ ಮುಖಂಡರಾದ ಖಾಸಿಂ ಹಾಜಿ ಮಿತ್ತೂರು, ಅಶ್ರಫ್ ಬಾವು, ಮೂಸಾ ಕರೀಂ, ಅಬ್ದುಲ್ ಹಮೀದ್ ಸಾಲ್ಮರ, ಮೂಸಾ ಕರೀಂ ಮಾಣಿ, ಶರೀಫ್ ಸಾಲ್ಮರ, ಹಮೀದ್ ಸೋಂಪಾಡಿ, ಅಲ್ತಾಫ್ ಬೆಟ್ಟಂಪಾಡಿ, ಬಶೀರ್ ಪರ್ಲಡ್ಕ, ಅಶ್ರಫ್ ಮುಕ್ವೆ, ರಶೀದ್ ಮುರ ಸೇರಿದಂತೆ ಹಲವಾರು ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು ಉಪಸ್ಥಿತರಿದ್ದರು.
ಮುಸ್ಲಿಂ ಯುವಜನ ಪರಿಷತ್ ನ ಉಪಾಧ್ಯಕ್ಷ ಇಬ್ರಾಹಿಂ ಹಾಜಿ ಸಾಗರ್ ಸ್ವಾಗತಿಸಿದರು. ಸಂಚಾಲಕ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.