ಪುತ್ತೂರು | NIA ಅಧಿಕಾರಿಗಳು ಸಂಚರಿಸುತ್ತಿದ್ದ ಪೊಲೀಸ್ ಜೀಪ್–ಬೈಕ್ ಅಪಘಾತ: ಸಹಕಾರ ಸಂಘದ CEO ಮೃತ್ಯು

Prasthutha|

ಪುತ್ತೂರು: ಎನ್ ಐ ಎ ಅಧಿಕಾರಿಗಳು ಸಂಚರಿಸುತ್ತಿದ್ದ ಪೊಲೀಸ್ ಜೀಪ್ ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿ ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಸಿಇಓ ಸಾವನ್ನಪ್ಪಿರುವ ಘಟನೆ ಪುತ್ತೂರಿನ ಸಂಪ್ಯ ಠಾಣೆಯ ಮುಂಭಾಗದಲ್ಲಿ ನಡೆದಿದೆ.

- Advertisement -


ಲಕ್ಷ್ಮಣ ನಾಯ್ಕ ಬಿ. (50) ಮೃತರು ಎಂದು ಗುರುತಿಸಲಾಗಿದೆ.


ಪೊಲೀಸ್ ಜೀಪ್ ಜಿಲ್ಲೆಯ ಡಿ. ಆರ್. ಗೆ ಸೇರಿದ್ದು, ಲಕ್ಷ್ಮಣ ನಾಯ್ಕ ಅವರು ಪುತ್ತೂರಿನಿಂದ ಆರ್ಲಪದವು ಕಡೆಗೆ ಹೋಗುತ್ತಿದ್ದರು. ಪೊಲೀಸ್ ಜೀಪ್ ಈ ವೇಳೆ ಅಪಘಾತ ಸಂಭವಿಸಿದೆ.
ಪರಿಣಾಮ ಲಕ್ಷ್ಮಣ ನಾಯ್ಕ ಗಂಭೀರ ಗಾಯಗೊಂಡು ಅವರು ಸಾವನ್ನಪ್ಪಿದ್ದಾರೆ.

Join Whatsapp