ಪುತ್ತೂರು | ಹಿಮ್ಮುಖವಾಗಿ ಚಲಿಸಿದ ಬಸ್: ಬ್ರೇಕ್ ಹಾಕಿ ನಿಲ್ಲಿಸಿದ ಸಿಝಾನ್

Prasthutha|

ಪುತ್ತೂರು: ಹಿಮ್ಮುಖವಾಗಿ ಚಲಿಸುತ್ತಿದ್ದ ಬಸ್ ಅನ್ನು ವಿದ್ಯಾರ್ಥಿಯೋರ್ವ ಅದನ್ನು ನಿಯಂತ್ರಿಸಿ, ಗಾಬರಿಗೊಂಡಿದ್ದ ಪ್ರಯಾಣಿಕರು ನಿರಾಳವಾಗುವಂತೆ ಮಾಡಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

- Advertisement -


ನಿಲ್ಲಿಸಿದ್ದ ಬಸ್ ಚಲಿಸಿದಾಗ, ಚಾಲಕನ ಹಿಂದಿನ ಸೀಟ್ ನಲ್ಲಿ ಕುಳಿತಿದ್ದ ಸಿಝಾನ್ ಹಸನ್ ತಕ್ಷಣ ಬಸ್ ಅನ್ನು ನಿಯಂತ್ರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.


ಪುತ್ತೂರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ನಲ್ಲಿ ಅನೇಕ ಪ್ರಯಾಣಿಕರ ಜತೆಗೆ, ವಿದ್ಯಾರ್ಥಿ ಸಿಝಾನ್ ಕುಳಿತಿದ್ದರು. ಇದ್ದಕ್ಕಿದ್ದಂತೆ ಬಸ್ ಹಿಮ್ಮುಖವಾಗಿ ಚಲಿಸಲಾರಂಭಿಸಿತು. ತಕ್ಷಣ ಚಾಲಕನ ಸೀಟಿಗೆ ಜಿಗಿದ ಸಿಜಾನ್ ಬ್ರೇಕ್ ಹಾಕಿ ಬಸ್ ಅನ್ನು ನಿಲ್ಲಿಸಿದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.



Join Whatsapp