ಪುತ್ತೂರು: ಬಿಜೆಪಿ ಮುಖಂಡನ ಪತ್ನಿ ನೀರಿನ ತೊಟ್ಟಿಗೆ ಬಿದ್ದು ಮೃತ್ಯು

Prasthutha|

ಪುತ್ತೂರು: ಬಿಜೆಪಿ ಮುಖಂಡ ಹಾಗೂ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಅವರ ಪತ್ನಿ ಶುಭಲಕ್ಷ್ಮಿ(50) ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

- Advertisement -

ಒಳಮೊಗ್ರು ಗ್ರಾಮದ ಕೈಕಾರದಲ್ಲಿರುವ ಮನೆ ಸಮೀಪದ ನೀರಿನ ತೊಟ್ಟಿಯಲ್ಲಿ ಶುಭಲಕ್ಷ್ಮಿ ಅವರ ಶವ ಪತ್ತೆಯಾಗಿದೆ. ಮನೆಯ ಗುಡ್ಡದ ಮೇಲೆ ಮಣ್ಣಿನ ಟ್ಯಾಂಕಿ ನಿರ್ಮಿಸಿದ್ದು ಅದಕ್ಕೆ ಟಾರ್ಪಾಲು ಹಾಕಿ ನೀರು ನಿಲ್ಲಿಸಲಾಗಿತ್ತು.

ಬೆಳಗ್ಗೆ ಹನ್ನೊಂದು ಗಂಟೆ ವರೆಗೆ ಪ್ರಕಾಶ್ಚಂದ್ರ ರೈ ಮನೆಯಲ್ಲಿದ್ದರು. ಹೆಂಡತಿಯೂ ಇದ್ದರು. ಆನಂತರ ಹೊರಗೆ ತೆರಳಿದ್ದ ಅವರು ಮಧ್ಯಾಹ್ನ ಒಂದೂವರೆ ಗಂಟೆ ವೇಳೆಗೆ ಮನೆಗೆ ಹಿಂದಿರುಗಿದಾಗ ಪತ್ನಿ ಮನೆಯಲ್ಲಿ ಇರಲಿಲ್ಲ. ಹುಡುಕಾಟದ ವೇಳೆ ತೊಟ್ಟಿಯಲ್ಲಿ ಶವ ಪತ್ತೆಯಾಗಿದೆ. ಮಗಳು ಕಾಲೇಜಿಗೆ ಹೋಗಿದ್ದು ಮನೆಯಲ್ಲಿ ಕೆಲಸದವರು ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Join Whatsapp