ಪುತ್ತೂರು | ಬುದ್ಧಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರ: ಆರೋಪಿ ಚಂದ್ರಶೇಖರ ಬಂಧನ

Prasthutha|

ಪುತ್ತೂರು: ಬುದ್ಧಿಮಾಂದ್ಯ ಯುವತಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ ಘಟನೆ ಪುತ್ತೂರು ತಾಲೂಕಿನ ಕಾಣಿಯೂರು ಸಮೀಪ ನಡೆದಿದ್ದು, ಆರೋಪಿ ಬಂಡಾಜೆ ನಿವಾಸಿ ಚಂದ್ರಶೇಖರ (57)ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಯುವತಿಯ ಸಹೋದರ ಚಾರ್ವಾಕದಲ್ಲಿರುವ ತನ್ನ ಜಮೀನಿನಲ್ಲಿ ಕೃಷಿ ಕೆಲಸಕ್ಕೆ  ತಂದೆ, ತಾಯಿಯವರನ್ನು ಬಿಟ್ಟು ಬರಲು ಹೋದ ಸಂದರ್ಭ, ಬುದ್ಧಿಮಾಂದ್ಯಳಾದ ಅಕ್ಕ ಮನೆಯಲ್ಲಿ ಒಬ್ಬಳೇ ಇದ್ದರು.

 ಚಾರ್ವಾಕದಿಂದ ವಾಪಸು ಮನೆಗೆ ಬಂದು ನೋಡಿದಾಗ ಬುದ್ಧಿಮಾಂದ್ಯಳಾದ ಅಕ್ಕ ಮನೆಯಲ್ಲಿ ಇರಲಿಲ್ಲ. ಎಲ್ಲೆಡೆ ಹುಡುಕಾಡಿದಾಗ ಮನೆಯ ಮುಂದಿರುವ  ಗುಡ್ಡದಲ್ಲಿ ಪತ್ತೆಯಾಗಿದ್ದಳು.

- Advertisement -

ಆಕೆಯನ್ನು  ವಿಚಾರಿಸಿದಾಗ “ನೀನು ನನ್ನ ಜತೆ ಗುಡ್ಡಕ್ಕೆ ಬರಬೇಕು. ಇಲ್ಲದಿದ್ದರೆ ನಿನಗೆ ತೊಂದರೆ ನೀಡುತ್ತೇನೆ’ ಎಂದು ಆರೋಪಿ ಚಂದ್ರಶೇಖರ ಬೆದರಿಸಿ ಕರೆದೊಯ್ದಿರುವುದಾಗಿ ಅಕ್ಕ ಹೇಳಿದ್ದಾಳೆ ಎಂದು ಸಹೋದರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

Join Whatsapp