ಪುತ್ತೂರು : ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನಲ್ಲಿ ABVP ಕಾರ್ಯಕರ್ತರಿಂದ ತ್ರಿಶೂಲ ದಾಳಿ, ವಿದ್ಯಾರ್ಥಿ ಗಂಭೀರ !

Prasthutha|

►ಕಳೆದ ವಾರ ಕಾಲೇಜು ವಿದ್ಯಾರ್ಥಿಗಳ ಸಭೆ ನಡೆಸಿ ಪ್ರಚೋದಿಸಿದ್ದ ಸಂಘಪರಿವಾರ !

- Advertisement -

ಪುತ್ತೂರು: ಪುತ್ತೂರಿನ ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನಲ್ಲಿ ಎಬಿವಿಪಿ ಕಾರ್ಯಕರ್ತರು ಇಂದು ಮತ್ತೊಮ್ಮೆ ಕಾಲೇಜು ಆವರಣದಲ್ಲಿ ಗೂಂಡಾಗಿರಿ ನಡೆಸಿದ್ದು, ಓರ್ವ ವಿದ್ಯಾರ್ಥಿಯ ಮೇಲೆ ತ್ರಿಶೂಲದಿಂದ ದಾಳಿ ನಡೆಸಿದ್ದಾರೆ. ಜೊತೆಗೆ ಇತರೆ ಇಬ್ಬರು ವಿದ್ಯಾರ್ಥಿಗಳ ಮೇಲೂ ಹಲ್ಲೆ ನಡೆಸಲಾಗಿದೆ.

ತ್ರಿಶೂಲ ದಾಳಿಗೊಳಗಾದ ವಿದ್ಯಾರ್ಥಿಯೋರ್ವ ಗಂಭೀರವಾಗಿ ಗಾಯಗೊಂಡಿದ್ದು,  ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಕೈಫುದ್ದೀನ್ ಎಂದು ಗುರುತಿಸಲಾಗಿದೆ. ದಾಳಿಗೊಳಗಾದ ಇತರೆ ವಿದ್ಯಾರ್ಥಿಗಳನ್ನು ಇಮ್ರಾನ್ ಮತ್ತು ತೌಸೀಫ್ ಎಂದು ಗುರುತಿಸಲಾಗಿದೆ. ಗಾಯಾಳುಗಳಲ್ಲಿ ಕೈಫುದ್ದೀನ್ ಮತ್ತು ಇಮ್ರಾನ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೆ, ತೌಸೀಫ್ ರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

 ನಿನ್ನೆ ಕೂಡಾ ಎಬಿವಿಪಿಯ ಗೂಂಡಾ ವಿದ್ಯಾರ್ಥಿಗಳು ಕೆಲವೊಂದು ಸಹ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದು, ಪ್ರಿನ್ಸಿಪಾಲರಿಗೆ ದೂರು ಸಲ್ಲಿಸಲಾಗಿತ್ತು. ಇಂದು ಪ್ರಿನ್ಸಿಪಾಲರು ನಿನ್ನೆ ದಾಳಿ ನಡೆಸಿದ್ದ ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದರು. ಇದನ್ನರಿತ ಎಬಿವಿಪಿ ಇಂದು ಪುತ್ತೂರಿನಲ್ಲಿ ರಾಲಿ ನಡೆಸಿ ಪ್ರಿನ್ಸಿಪಾಲರ ಮೇಲೆ ಒತ್ತಡ ಹಾಕುವ ಪ್ರಯತ್ನ ನಡೆಸಿತ್ತು.

ಈ ರಾಲಿಯಲ್ಲಿ ಕೊಂಬೆಟ್ಟು ಕಾಲೇಜಿನ ವಿದ್ಯಾರ್ಥಿಗಳಲ್ಲದೆ ಇತರೆ ಹೊರಗಿನ ಕಾಲೇಜಿನ ವಿದ್ಯಾರ್ಥಿಗಳೂ ಸೇರಿದ್ದರು ಎನ್ನಲಾಗಿದೆ.  ಮೆರವಣಿಗೆ ನಡೆಸಿ ಕಾಲೇಜಿಗೆ ಬಂದ ಎಬಿವಿಪಿಯ ಗೂಂಡಾಗಳು ಕಾಲೇಜು ಆವರಣದಲ್ಲಿದ್ದ ಮೂವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದರು ಎನ್ನಲಾಗಿದೆ. ಇವರಲ್ಲಿ ಕೈಫುದ್ದೀನ್ ಮೇಲೆ  ತ್ರಿಶೂಲದಿಂದ ಚುಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದಾರೆ.

ಕಳೆದ ವಾರ ಇದೇ ಕಾಲೇಜಿನ ಪರಿಸರದಲ್ಲಿರುವ ದೇವಸ್ಥಾನದ ಆವರಣದಲ್ಲಿ ಸಂಘಪರಿವಾರ ಸಂಘಟನೆಗಳು ಅರುಣ್ ಪುತ್ತಿಲ ಎಂಬವನ ನೇತೃತ್ವದಲ್ಲಿ  ಸಭೆಯೊಂದನ್ನು ನಡೆಸಿದ್ದು, ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಲು ಪ್ರಚೋದಿಸಿದ್ದವು ಎಂದು ಆರೋಪಿಸಲಾಗಿದೆ.   ಅ ಬಳಿಕ ಕೊಂಬೆಟ್ಟು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೇಲಿನ ದಾಳಿ ನಿರಂತರವಾಗಿ ನಡೆಯುತ್ತಿದ್ದು, ಪೊಲೀಸರು ಕಠಿನ ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.   

Join Whatsapp