ಪುತ್ತಿಗೆ ಗ್ರಾಮ ಪಂಚಾಯತ್ | ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಪ್ರವೀಣ್ ಶೆಟ್ಟಿ, ಉಪಾಧ್ಯಕ್ಷೆಯಾಗಿ SDPI ಬೆಂಬಲಿತ ತಾಹಿರಾ ಬಾನು ಆಯ್ಕೆ

Prasthutha|

ಮಂಗಳೂರು : ಮೂಡುಬಿದಿರೆ ತಾಲೂಕು ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷೆ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ಇಂದು ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರವೀಣ್ ಶೆಟ್ಟಿ ಮತ್ತು ಉಪಾಧ್ಯಕ್ಷೆ ಸ್ಥಾನಕ್ಕೆ ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿ ತಾಹಿರಾ ಬಾನು ಆಯ್ಕೆಯಾದರು.

- Advertisement -

ಪುತ್ತಿಗೆ ಗ್ರಾಮ ಪಂಚಾಯತ್ ನಲ್ಲಿ ಒಟ್ಟು 21 ಸ್ಥಾನಗಳಿದ್ದು, ಕಾಂಗ್ರೆಸ್ ಬೆಂಬಲಿತರು 8, ಬಿಜೆಪಿ ಬೆಂಬಲಿತರು 6, ಎಸ್ ಡಿಪಿಐ ಬೆಂಬಲಿತರು 2, ಜೆಡಿಎಸ್ ಬೆಂಬಲಿತರು 2, ಸಿಪಿಎಂ ಬೆಂಬಲಿತ 1, ಸ್ವತಂತ್ರ 2 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರವೀಣ್ ಶೆಟ್ಟಿ ಮತ್ತು ಉಪಾಧ್ಯಕ್ಷೆ ಸ್ಥಾನಕ್ಕೆ ಎಸ್ ಡಿಪಿಐ ಬೆಂಬಲಿತ ತಾಹಿರಾ ಬಾನು ಅವರು ಕಾಂಗ್ರೆಸ್ ಬೆಂಬಲಿತರ 8, ಎಸ್ ಡಿಪಿಐ ಬೆಂಬಲಿತರ 2 ಮತ್ತು ಸಿಪಿಎಂ ಬೆಂಬಲಿತ ಒಬ್ಬ ಅಭ್ಯರ್ಥಿಯ ಬೆಂಬಲದೊಂದಿಗೆ ಒಟ್ಟು 11 ಮತಗಳನ್ನು ಪಡೆದರು.

- Advertisement -

ಬಿಜೆಪಿ ಬೆಂಬಲಿತರಿಂದ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಕುಮಾರ್ ಮತ್ತು ಉಪಾಧ್ಯಕ್ಷೆ ಸ್ಥಾನಕ್ಕೆ ಸೌಮ್ಯಾ ಪ್ರಸನ್ನ ಸ್ಪರ್ಧಿಸಿದ್ದರು. ಅವರಿಗೆ 10 ಮತಗಳು ದೊರೆತವು.



Join Whatsapp