ಸುಳ್ಳು ಸುದ್ದಿ‌ ಪ್ರಸಾರ ಮಾಡುವ ಪತ್ರಕರ್ತರಿಗೆ 15 ವರ್ಷ ಜೈಲು !

Prasthutha|

ರಷ್ಯಾ: ಉಕ್ರೇನ್ ದೇಶದ ಮೇಲೆ ರಷ್ಯಾ ತನ್ನ ಆಕ್ರಮಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಬೆನ್ನಲ್ಲೇ ರಷ್ಯಾದಲ್ಲಿ ಕಾರ್ಯಾಚರಿಸುತ್ತಿರುವ ಮಾಧ್ಯಮಗಳಿಗೆ ಮೂಗುದಾರ ಹಾಕಲು ಅಧ್ಯಕ್ಷ ವ್ಲಾದಿಮಿರ್‌‌ ಪುಟಿನ್ ನಿರ್ಧರಿಸಿದ್ದಾರೆ.
ರಷ್ಯಾ ಸೈನ್ಯದ ಕುರಿತು ತಪ್ಪಾದ ಮಾಹಿತಿಯನ್ನು ನೀಡುವ ಹಾಗೂ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುವ ಪತ್ರಕರ್ತರನ್ನು ಬಂಧಿಸುವ ಹಾಗೂ ಅವರಿಗೆ 15 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೆ ತರುವುದಾಗಿ ಪುಟಿನ್ ಘೋಷಿಸಿದ್ದಾರೆ.
ಪುಟಿನ್ ನಿರ್ಧಾರ ಹೊರಬೀಳುತ್ತಲೇ ರಷ್ಯಾದಲ್ಲಿ ತಮ್ಮ ಪ್ರಸಾರವನ್ನು ನಿಲ್ಲಿಸಲು BBC, CNN, ಬ್ಲೂಮ್ ಬರ್ಗ್ ಸೇರಿದಂತೆ ‘ಗ್ಲೋಬಲ್ ನ್ಯೂಸ್ ಮೀಡಿಯಾ’ ನಿರ್ಧರಿಸಿದೆ. ಪತ್ರಕರ್ತರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ GNM ತಿಳಿಸಿದೆ.
ಈ ಶಾಸನವು “ಸ್ವತಂತ್ರ ಪತ್ರಿಕೋದ್ಯಮದ ಪ್ರಕ್ರಿಯೆಯನ್ನು ಅಪರಾಧಿ ಎಂದು ಬಿಂಬಿಸುವ ಪ್ರಯತ್ನವಾಗಿ ತೋರುತ್ತಿದೆ” ಎಂದು BBCಯ ಮಹಾ ನಿರ್ದೇಶಕ ಟಿಮ್ ಡೇವಿ ಹೇಳಿದ್ದಾರೆ. “ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ರಷ್ಯಾ ಒಕ್ಕೂಟದೊಳಗಿನ ಎಲ್ಲಾ ಬಿಬಿಸಿ ನ್ಯೂಸ್’ನಲ್ಲಿರುವ ಪತ್ರಕರ್ತರು ಮತ್ತು ಅವರ ಸಹಾಯಕ ಸಿಬ್ಬಂದಿಯು ತಮ್ಮ ಕೆಲಸಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಸೂಚಿಸಲಾಗಿದೆ ಇದಲ್ಲದೆ ನಮಗೆ ಬೇರೆ ಆಯ್ಕೆಗಳಿಲ್ಲ ಟಿಮ್ ಡೇವಿ ಹೇಳಿದ್ದಾರೆ.

Join Whatsapp