ಉಕ್ರೇನ್ ಹೋರಾಟ ನಿಲ್ಲಿಸದ ಹೊರತು ರಷ್ಯಾ ಮುಂದುವರೆಯಲಿದೆ: ಪುಟಿನ್ ಎಚ್ಚರಿಕೆ

Prasthutha|

ಮಾಸ್ಕೋ: ಉಕ್ರೇನ್ ಹೋರಾಟ ನಿಲ್ಲಿಸದ ಹೊರತು ಆ ದೇಶದ ವಿರುದ್ಧ ಹೂಡಲಾದ ಯುದ್ಧವನ್ನು ಹಿಂಪಡೆಯುವ ಮಾತಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತೊಮ್ಮೆ ಎಚ್ಚರಿಸಿದ್ದಾರೆ.

- Advertisement -

ಅಲ್ಲದೇ, ಹನ್ನೊಂದು ದಿನಗಳ ಬಳಿಕವೂ ಕದನ ವಿರಾಮ ಸಾಧ್ಯವಾಗದಿರುವುದಕ್ಕೆ ಉಕ್ರೇನ್ ಕಾರಣ ಎಂದು ಪುಟಿನ್ ಆರೋಪಿಸಿದ್ದಾರೆ.

ಎರಡನೇ ಮಹಾಯುದ್ಧದ ಬಳಿಕ ಹಲವು ದಶಕಗಳ ನಂತರ ಯುರೋಪ್ ನಲ್ಲಿ ನಿರಾಶ್ರಿತರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ವಿಶ್ವ ಸಂಸ್ಥೆ ಆತಂಕ ವ್ಯಕ್ತಪಡಿಸಿದ ಬೆನ್ನಿಗೆ ಕದನ ವಿರಾಮ ನಡೆಸುವಂತೆ ಮನವೊಲಿಸಲು ಭಾನುವಾರ ಟರ್ಕಿ ಅಧ್ಯಕ್ಷ ತಯ್ಯಬ್ ಎರ್ದೊಗಾನ್ ಪ್ರಯತ್ನಿಸಿದರು.

- Advertisement -

ಫೋನ್ ಕರೆ ಮೂಲಕ ಸಂಭಾಷಣೆ ನಡೆಸಿದ ಇಬ್ಬರು ನಾಯಕರು ಕದನ ವಿರಾಮ ಕುರಿತಾಗಿ ಚರ್ಚಿಸಿದರು. ಈ ಸಂದರ್ಭ ಎರ್ದೊಗಾನ್ ಮಾನವೀಯ ದೃಷ್ಟಿಯಿಂದ ಯುದ್ಧ ಕೊನೆಗೊಳಿಸುವಂತೆ ಕೇಳಿಕೊಂಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಪುಟಿನ್, ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ರಷ್ಯಾವು ಉಕ್ರೇನ್ ಸೇರಿದಂತೆ ಇತರ ದೇಶಗಳ ಜೊತೆಗೆ ಮಾತುಕತೆಗೆ ಸಿದ್ಧವಿದೆ. ಆದರೆ, ಉಕ್ರೇನ್ ತನ್ನ ಹೋರಾಟದಿಂದ ಹಿಂದೆ ಸರಿಯುವಂತೆ ತಿಳಿಸಿದ್ದಾರೆ.



Join Whatsapp