ನವದೆಹಲಿ: ಹಿಟ್ ಆ್ಯಂಡ್ ರನ್ ಪ್ರಕರಣವೊಂದು ಇಂದು ಪಂಜಾಬ್ ನ ಜಲಂಧರ್ ನಲ್ಲಿ ನಡೆದಿದ್ದು, ವೇಗವಾಗಿ ಬಂದ ಕಾರು ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಹರಿದ ಪರಿಣಾಮ ಯುವತಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಸ್ತೆ ದಾಟುತ್ತಿದ್ದವರ ಮೇಲೆರಗಿದ ಕಾರು ಚಾಲಕನಾಗಿರುವ ಸಬ್ ಇನ್ಸ್ ಪೆಕ್ಟರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಇಂದು ಬೆಳಗ್ಗೆ ರಸ್ತೆ ದಾಟಲು ಯುವತಿಯರಿಬ್ಬರು ಮುಂದಾಗುತ್ತಿದ್ದಂತೆ ಶರವೇಗದಿಂದ ಆಗಮಿಸಿದ ಬಿಳಿಬಣ್ಣದ ಮಾರುತಿ ಬ್ರೀಝ್ ಕಾರು ಅವರ ಮೇಲೆ ಹರಿದಿದೆ. ಈ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತದ ರಭಸಕ್ಕೆ ಯುವತಿ ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಸ್ತೆ ದಾಟಲು ಅಣಿಯಾಗುತ್ತಿದ್ದ ಮಹಿಳೆಯರ ಮೇಲೆ ಸಬ್ ಇನ್ಸ್ ಪೆಕ್ಟರ್ ಅಮೃತ ಪಾಲ್ ಸಿಂಗ್ ಅವರು ಚಲಾಯಿಸುತ್ತಿದ್ದ ಕಾರು ಡಿಕ್ಕಿಹೊಡೆದು ಅಲ್ಲಿಂದ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೇಳೆ ಅವರಿಬ್ಬರು ರಸ್ತೆಗೆಸೆಯಲ್ಪಟ್ಟಿದ್ದರು.
ಕಾರು ಶೋರೂಂ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ನವಜೋತ್ ಕೌರ್ ಎಂಬಾಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬಳು ಗಂಭೀರಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ನಂತರ ಜಲಂಧರ್ – ಫಗ್ವಾರಾ ಹೆದ್ದಾರಿಯಲ್ಲಿ ಸಾರ್ವಜನಿಕ ಜಮಾಯಿಸಿ ಸಂಚಾರವನ್ನು ನಿರ್ಬಂಧಿಸಿದರು.
ಕೆಲಸಕ್ಕೆ ತೆರಳುತ್ತಿದ್ದ ಮಗಳು ರಸ್ತೆ ದಾಟುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು, ಸಬ್ ಇನ್ಸ್ ಪೆಕ್ಟರ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕೆಂದು ಮೃತ ನವಜೋತ್ ತಾಯಿ ತೇಜಿಂದರ್ ಕೌರ್ ಒತ್ತಾಯಿಸಿದ್ದಾರೆ.