ರಾಜ್ಯದಲ್ಲಿ ಅಕ್ಕಿಯ ಕೊರತೆಯನ್ನು ನೀಗಿಸಲು ಪಂಜಾಬ್ ರಾಜ್ಯ ಸಿದ್ಧ: ಪೃಥ್ವಿ ರೆಡ್ಡಿ

Prasthutha|

ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಅಕ್ಕಿ ಕೊರತೆಯ ಸಮಸ್ಯೆಯನ್ನು ನಿವಾರಿಸಲು ಆಮ್ ಆದ್ಮಿ ಪಕ್ಷದ ಅಧಿಕಾರವಿರುವ  ಪಂಜಾಬ್ ರಾಜ್ಯ ಸರ್ಕಾರವು ಸಂಪೂರ್ಣ ಸಹಕಾರ ನೀಡಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಯಾವುದೇ ಪೂರ್ವ ಸಿದ್ಧತೆಗಳಿಲ್ಲದೆ, ಆಮ್ ಆದ್ಮಿ ಪಕ್ಷದ ಕಾರ್ಯಕ್ರಮಗಳನ್ನು ಸಂಪೂರ್ಣ ನಕಲು ಮಾಡಿ  ಕೇವಲ  ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಹಲವು ತರಾತುರಿ  ಗ್ಯಾರಂಟಿಗಳನ್ನು ಘೋಷಿಸಿ ಇಂದು ಅಧಿಕಾರಕ್ಕೆ ಬಂದಿದ್ದಾರೆ.  ಈ  ಅರೆ ಬೆಂದ  ಗ್ಯಾರಂಟಿಗಳಿಂದಾಗಿ ರಾಜ್ಯದ ಬಡ ಜನತೆಯನ್ನು ಇಕ್ಕಟ್ಟಿಗೆ  ಸಿಲುಕಿಸುತ್ತಿರುವ ಈ   ಸಂದರ್ಭದಲ್ಲಿ  ನಾವುಗಳು ಯಾವುದೇ ರಾಜಕೀಯ ಕುಹಕಕ್ಕೆ ಕೈ ಹಾಕುವುದಿಲ್ಲ. ಈಗ ತಲೆದೋರಿರುವ  ರಾಜ್ಯದ ಬಡ ಜನತೆಯ ಸಂಕಷ್ಟವನ್ನು ನಿವಾರಿಸುವುದು ನಮ್ಮ ಪಕ್ಷದ ಗುರಿ. ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ರವರೊಂದಿಗೆ ನಾನು ನಿನ್ನೆ  ನಡೆಸಿದ ಸಂಭಾಷಣೆಯಲ್ಲಿ ಅಲ್ಲಿನ ಮುಖ್ಯಮಂತ್ರಿಗಳು  ಸಂಪೂರ್ಣ ಸಹಾಯ ಹಸ್ತವನ್ನು ನೀಡಲು ತಾತ್ವಿಕವಾಗಿ  ಸಿದ್ದರಿದ್ದೇವೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು ಕೂಡಲೇ ಪಂಜಾಬ್ ಮುಖ್ಯಮಂತ್ರಿಗಳೊಂದಿಗೆ ಮಾತುಕತೆಯನ್ನು ನಡೆಸಲು ಬೇಕಾಗಿರುವ ಸಂಪೂರ್ಣ ತಾಂತ್ರಿಕ ಬೆಂಬಲವನ್ನು ನಾವು ನೀಡಲು ಸಿದ್ದರಿದ್ದೇವೆ ” ಎಂದು ಪೃಥ್ವಿ ರೆಡ್ಡಿ ತಿಳಿಸಿದರು.

ಇದೇ  ಸಂದರ್ಭದಲ್ಲಿ ಮಾತನಾಡಿದ ಪೃಥ್ವಿ ರೆಡ್ಡಿ ಕೇಂದ್ರದ ಬಿಜೆಪಿ ಸರ್ಕಾರದ  ಧೋರಣೆ ಬಡವರ ವಿರೋಧಿ ಹಾಗೂ ದುಃಖದ ಸಂಗತಿ ಎಂದು  ಖಂಡಿಸಿದರು.

- Advertisement -

ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ  ಪತ್ರವನ್ನು ಬರೆಯಲಾಗಿದೆ. ಕೊರತೆಯಾಗಿರುವ  ಹೆಚ್ಚುವರಿ ಅಕ್ಕಿಯನ್ನು ಪಂಜಾಬ್ ಸರಕಾರದಿಂದ ಪಡೆದುಕೊಂಡು ಸಂಕಷ್ಟವನ್ನು ಬಗೆಹರಿಸಿಕೊಳ್ಳಲು ಮುಂದಾಗಬೇಕೆಂದು ಪೃಥ್ವಿ ರೆಡ್ಡಿ   ಸರ್ಕಾರವನ್ನು ಒತ್ತಾಯಿಸಿದರು.



Join Whatsapp