ಪಂಜಾಬ್‌ ಸಿಎಂ ಚರಣ್‌ ಜಿತ್‌ ಸಿಂಗ್‌ ಸಹೋದರ ಸಂಬಂಧಿ ಜಸ್ವಿಂದರ್‌ ಬಿಜೆಪಿ ಸೇರ್ಪಡೆ

Prasthutha|

ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಸಹೋದರ ಸಂಬಂಧಿ ಜಸ್ವಿಂದರ್‌ ಸಿಂಗ್‌ ಧಾಲಿವಾಲ್‌ ಬಿಜೆಪಿ ಸೇರ್ಪಡೆಯಾಗಿ ಬಿಗ್ ಶಾಕ್ ನೀಡಿದ್ದಾರೆ.

- Advertisement -

ಪಂಜಾಬ್‌ ನಲ್ಲಿ ಫೆಬ್ರವರಿ 14 ರಂದು ವಿಧಾನಸಭೆ ಚುನಾವಣೆ ನಡೆಯುತ್ತಿರುವ ಬೆನ್ನಲ್ಲೇ ಜಸ್ವಿಂದರ್‌ ಬಿಜೆಪಿ ಸೇರ್ಪಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರ ನೇತೃತ್ವದಲ್ಲಿ ಜಸ್ವಿಂದರ್‌ ಬಿಜೆಪಿ ಸೇರಿದ್ದು, ಸಿಎಂ ಚನ್ನಿ ಅವರಿಗೆ ಅಲ್ಪ ಹಿನ್ನಡೆ ಎನ್ನಲಾಗಿದೆ.

Join Whatsapp