ಪಂಜಾಬ್ ಬ್ಯಾಂಕ್ ವಂಚಕ ನೀರವ್ ಮೋದಿ ಆಪ್ತ ಸುಭಾಷ್ ಶಂಕರ್ ಭಾರತಕ್ಕೆ ಗಡಿಪಾರು

Prasthutha|

ಮುಂಬೈ: ಬಹು ಕೋಟಿ ರೂಪಾಯಿಗಳನ್ನು ವಂಚಿಸಿ ದೇಶ ತೊರೆದು ತಲೆಮರೆಸಿಕೊಂಡಿದ್ದ ನೀರವ್ ಮೋದಿಯ ಆಪ್ತ ಸಹಾಯಕ ಸುಭಾಷ್ ಶಂಕರ್ ನನ್ನು ಈಜಿಪ್ಟ್’ನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನೀರವ್ ಮೋದಿ ಆಪ್ತ ಸುಭಾಷ್ ರನ್ನು ಮುಂಬೈಗೆ ಗಡಿಪಾರು ಮಾಡಲಾಗಿದ್ದು, ಆತನನ್ನು ಮುಂಬೈ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದೇವೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -


7000 ಕೋಟಿಗಳ ಪಿಎನ್ ಬಿ ಸಾಲ ವಂಚನೆ ಹಗರಣ ಬಯಲಾಗುತ್ತಲೇ ಶಂಕರ್, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಜೊತೆಗೆ 2018ರಲ್ಲಿ ವಿದೇಶಕ್ಕೆ ಪರಾರಿಯಾಗಿದ್ದರು. ವಂಚನೆಗೈದು ದೇಶದಿಂದ ಪರಾರಿಯಾಗಿರುವ ಆರೋಪಿಗಳನ್ನು ಭಾರತಕ್ಕೆ ಕರೆತರಲು ಸಿಬಿಐ ಪ್ರಯತ್ನಿಸುತ್ತಿತ್ತು, ಅಲ್ಲದೇ ಇದೀಗ ಗಡಿಪಾರಾಗಿರುವ ಸುಭಾಷ್ ಶಂಕರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು.


ನೀರವ್ ಮೋದಿ ಒಡೆತನದ ಕಂಪನಿಯಲ್ಲಿ ಹಣಕಾಸು ವಿಭಾಗದ ಡಿಜಿಎಂ ಆಗಿದ್ದ ಶಂಕರ್ ಸಿಬಿಐ ನಾಲ್ಕು ವರ್ಷಗಳ ಹಿಂದೆಯೇ ಸುಭಾಷ್ ಶಂಕರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು. ನ್ಯಾ. ಜೆ.ಸಿ.ಜಗ್ದಾಳೆ ಅವರನ್ನೊಳಗೊಂಡ ಸಿಬಿಐ ವಿಶೇಷ ನ್ಯಾಯಾಲಯ ಸುಭಾಷ್ ವಿರುದ್ಧ ಬಂಧನ ವಾರಂಟ್ ಅನ್ನೂ ಹೊರಡಿಸಿತ್ತು.



Join Whatsapp