ಬೆಂಗಳೂರು: ಮುಸ್ಲಿಂ ವಿರೋಧಿ ಅಬಿಯಾನಗಳಲ್ಲಿ ಮುಂಚೂಣಿಯಲ್ಲಿರುವ ಹಿಂದುತ್ವಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧದ ವೇಶ್ಯಾವಾಟಿಕೆ ಪ್ರಕರಣದ FIR ಪ್ರತಿಯೊಂದು ನಿನ್ನೆಯಿಂದ ಸಾಮಾಜಿಕ ವಲಯಗಳಲ್ಲಿ ಹರಿದಾಡುತ್ತಿದ್ದು, ತನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದ್ದರೂ ಆಮೇಲೆ ತನ್ನ ಫೇಸ್ ಬುಕ್ ನ ಅಧಿಕೃತ ಪೇಜಿನಲ್ಲಿ ತಪ್ಪು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾನೆ.
“ನನ್ನ ತಪ್ಪಿನಿಂದ ನನ್ನ ಗುರು ಸಮಾನರಾದ ಚಕ್ರವರ್ತಿ ಸೂಲಿಬೆಲೆ ಮತ್ತು ಪ್ರಮೋದ್ ಮುತಾಲಿಕ್ ಅವರಿಗೆ ಮುಜುಗರ ಉಂಟು ಮಾಡಿದ್ದರೆ ನನ್ನನ್ನು ಕ್ಷಮಿಸಬೇಕು ಎಂದು ಹೇಳಿ ಹಿಂದೂ ಕಾರ್ಯಕರ್ತರಲ್ಲಿ ಕೂಡಾ ಕ್ಷಮೆ ಯಾಚನೆ ಮಾಡಿದ್ದಾನೆ. ನಾನು ಇನ್ನು ಎಂದಿಗೂ ಅಂತಹ ತಪ್ಪು ಮಾಡಲ್ಲ, ನನಗೆ ಹಿಂದೂಪರ ಕಾರ್ಯಗಳಲ್ಲಿ ಮುಂದುವರಿಯಲು ನೀವೆಲ್ಲಾ ದಯವಿಟ್ಟು ಒಂದು ಅವಕಾಶ ಮಾಡಿಕೊಡಬೇಕು ಎಂದು ಬೇಡಿಕೊಂಡಿದ್ದಾನೆ.
ಫ್ಲಾಟ್ ಅನ್ನು ಬಾಡಿಗೆ ಪಡೆದುಕೊಂಡು ಹಿಂದೂ ಯುವತಿಯರನ್ನು ಬಳಸಿ ದಂಧೆ ನಡೆಸುವ ವೇಳೆ ಪೊಲೀಸರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದ ಪುನೀತ್ ಕೆರೆಹಳ್ಳಿ ತನ್ನ ಮೇಲೆ ಸುಮ್ಮನೆ ಆರೋಪ ಹೊರಿಸಲಾಗುತ್ತಿದೆ ಎಂದು ಹಿಂದೂ ಕಾರ್ಯಕರ್ತರು ಯಾರೂ ಅದನ್ನು ನಂಬಬೇಡಿ ಎಂದು ಅವಲತ್ತುಕೊಂಡಿದ್ದಾನೆ.