ಪುಣೆ ಕಾರು ಅಪಘಾತ: ಜಾಮೀನು ನೀಡಿದ್ದ ನ್ಯಾಯಮಂಡಳಿ ಸದಸ್ಯರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು

Prasthutha|

ಪುಣೆ: ಇಬ್ಬರ ಸಾವಿಗೆ ಕಾರಣವಾದ ಪುಣೆಯ ಪೋಷೆ ಕಾರು ದುರಂತದಲ್ಲಿ ಆರೋಪಿ ಬಾಲಕನಿಗೆ ಜಾಮೀನು ಮಂಜೂರು ಮಾಡಿದ್ದ ಬಾಲಾಪರಾಧ ನ್ಯಾಯಮಂಡಳಿ ಸದಸ್ಯರ ವಿರುದ್ಧ ಶಿಸ್ತು ಕ್ರಮ ಜರಗಿಸುವಂತೆ ತನಿಖಾ ಸಂಸ್ಥೆ ಶಿಫಾರಸು ಮಾಡಿದೆ.

- Advertisement -

ಕಲ್ಯಾಣಿ ನಗರ ಪ್ರದೇಶದಲ್ಲಿ ಮೇ 19ರಂದು ಅಪ್ರಾಪ್ತ ಬಾಲಕ ಮದ್ಯಪಾನದ ನಶೆಯಲ್ಲಿ ಕಾರು ಚಲಾಯಿಸಿದ್ದು, ಅಪಘಾತ ಜರಗಿತ್ತು. ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಐಟಿ ಉದ್ಯೋಗಿಗಳು ಮೃತಪಟ್ಟಿದ್ದರು ಎಂದು ಪ್ರಕರಣ ದಾಖಲಾಗಿತ್ತು.

ವಿಚಾರಣೆ ನಡೆಸಿದ ಬಾಲಾಪರಾಧ ನ್ಯಾಯಮಂಡಳಿಯ ಸದಸ್ಯ ಎಲ್‌.ಎನ್. ದನ್ವಾಡೆ ಬಾಲಕನಿಗೆ 300 ಪದಗಳ ಪ್ರಬಂಧ ಬರೆಯುವ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದ್ದರು ಇದರ ವಿರುದ್ಧ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿತ್ತು.

- Advertisement -

ಜಾಮೀನು ನೀಡಿದ ನ್ಯಾಯಮಂಡಳಿಯ ಸದಸ್ಯರ ವಿರುದ್ಧ ತನಿಖೆ ನಡೆಸುವ ಹೊಣೆಯನ್ನು ಹೊತ್ತ ಮಹಾರಾಷ್ಟ್ರ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ತನಿಖೆ ನಡೆಸಿ ವರದಿ ಸರ್ಕಾರಕ್ಕೆ ಸಲ್ಲಿಸಿತ್ತು. ಜಾಮೀನು ಮಂಜೂರು ಮಾಡುವಾಗ ಕಾರ್ಯವಿಧಾನದ ಲೋಪ, ನಿಯಮಗಳ ಅನುಸರಣೆಯಲ್ಲಿ ಲೋಪ ಆಗಿದೆ ಎಂದು ಹೇಳಲಾಗಿದೆ.

ಈ ವರದಿ ಆಧರಿಸಿ ಸರ್ಕಾರವು ನ್ಯಾಯಮಂಡಳಿಯ ಸದಸ್ಯರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ ಅವರ ಉತ್ತರ ತೃಪ್ತಿಕರವಾಗಿರದ ಕಾರಣ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.



Join Whatsapp