ರೋಗಿಯ ಪ್ರಾಣ ಉಳಿಸಿದ ಸಂಚಾರ ಪೊಲೀಸ್ ಸಿಬ್ಬಂದಿಯ ಸಮಯಪ್ರಜ್ಞೆ

Prasthutha|

ಬೆಂಗಳೂರು: ನಗರದಲ್ಲಿ ಸಂಚಾರ ಪೊಲೀಸ್ ಪೇದೆಯೊಬ್ಬರ ಸಮಯಪ್ರಜ್ಞೆಯಿಂದ  ರೋಗಿಯೊಬ್ಬರ ಪ್ರಾಣ ಉಳಿದಿದೆ.

- Advertisement -

ರೋಗಿಯ ಪ್ರಾಣ ಉಳಿಸಿ ಸಮಯ ಪ್ರಜ್ಞೆ ಮೆರೆದ ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣೆಯ ಪೇದೆ ಕಾಸಪ್ಪ ಕಲ್ಲೂರು ಕಾರ್ಯಕ್ಕೆ ಎಲ್ಲರಿಂದ ಶ್ಲಾಘನೆ ವ್ಯಕ್ತವಾಗಿದೆ.

ನಗರದ ಗ್ಲೋಬಲ್ ಆಸ್ಪತ್ರೆಯಿಂದ ರೋಗಿಯೊಬ್ಬರನ್ನು ಬೇರೆ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿತ್ತು. ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಆಂಬ್ಯುಲೆನ್ಸ್ ಮೂಲಕ ಕರೆದೊಯ್ಯುತ್ತಿದ್ದಾಗ, ವಿಧಾನಸೌಧದ ಸಿಐಡಿ ಕಚೇರಿ ಬಳಿ ಟೈರ್ ಪಂಚರ್ ಆಗಿದೆ.

- Advertisement -

ಇದರಿಂದ ರೋಗಿಯ ಪತ್ನಿ ಹಾಗೂ ಮಗಳು ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಕೂಡಲೇ ಸುಮಾರು 10ಕ್ಕೂ ಹೆಚ್ಚು ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾರೆ. 45 ನಿಮಿಷಗಳಿಂದ ಸತತವಾಗಿ ಕರೆ ಮಾಡಿದರೂ ಯಾವುದೇ ಆಂಬ್ಯುಲೆನ್ಸ್ ಸಿಗಲಿಲ್ಲ.

ಈ ವೇಳೆ ಆಂಬ್ಯುಲೆನ್ಸ್ ನಲ್ಲಿದ್ದ ರೋಗಿಯ ಸ್ಥಿತಿ ನೋಡಿದ ಸಂಚಾರ ಪೊಲೀಸ್ ಪೇದೆ ಕಾಸಪ್ಪ ಕಲ್ಲೂರು ಎಂಬುವವರು ರೋಗಿಯ ಪ್ರಾಣ ಉಳಿಸಲು ಸ್ವತಃ ಮೆಕಾನಿಕ್ ಆಗಿದ್ದಾರೆ.

ತಾವೇ ಆಂಬ್ಯುಲೆನ್ಸ್ ನ ಟಯರ್ ಬದಲಾಯಿಸಿ ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ಸಿಬ್ಬಂದಿಯಾಗಿರುವ ಕಾಸಪ್ಪ ಕಲ್ಲೂರು ಅವರ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.



Join Whatsapp