ಅಂದು ಪುಲ್ವಾಮಾ, ಇಂದು ಸ್ಮೋಕ್ ಬಾಂಬ್: ಎಸ್.ಆರ್ ಶ್ರೀನಿವಾಸ್

Prasthutha|

ತುಮಕೂರು: ಚುನಾವಣೆ ಬಂದಾಗ ಬಿಜೆಪಿಗರು ಯಾವುದಾರೂ ಒಂದು ಗಲಾಟೆಯನ್ನ ಸೃಷ್ಟಿ ಮಾಡುತ್ತಾರೆ. ಅಂದು ಪುಲ್ವಾಮಾ ದಾಳಿ) ಮಾಡಿಸಿದ್ದು ಬಿಜೆಪಿಗರೇ ಎಂದು ಗುಬ್ಬಿ ಶಾಸಕ ಎಸ್.ಆರ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

- Advertisement -

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪುಲ್ವಾಮಾ ದಾಳಿ ಮಾಡಿಸಿದ್ದು, ಬಿಜೆಪಿಗರೇ, ಚುನಾವಣೆ ಬಂದಾಗ ಯಾವುದಾರೂ ಒಂದು ಗಲಾಟೆ ಸೃಷ್ಟಿ ಮಾಡಿಸುತ್ತಾರೆ. ಸ್ಮೋಕ್ ಬಾಂಬ್ ಪ್ರಕರಣ ವಿಚಾರದಲ್ಲಿಯೂ ಪಾಸ್ ಕೊಟ್ಟಿದ್ದು ಪ್ರತಾಪ್ ಸಿಂಹ. ಅದೇ ಪಾಸನ್ನ ಪೀರ್ ಸಾಬ್ನೋ ಅಥವಾ ಕಾಂಗ್ರೆಸ್ನವರೋ ಕೊಟ್ಟಿದ್ದರೇ ಅದರ ಲಾಭವನ್ನ ಬಿಜೆಪಿಯವರೇ ಪಡೆಯುತ್ತಿದ್ದರು. ಈ ದೇಶದಲ್ಲಿ ಎಷ್ಟು ಗಲಾಟೆ ಮಾಡಿಸುತಿದ್ರು ಎಂದು ಕಿಡಿ ಕಾರಿದ್ದಾರೆ.



Join Whatsapp