ಪುದು ಗ್ರಾಮ ಪಂಚಾಯತ್ ಸದಸ್ಯ ಹುಸೇನ್ ಪಾಡಿ ನಿಧನ

Prasthutha|

ಬಂಟ್ವಾಳ: ಕಾಂಗ್ರೆಸ್ ಬೆಂಬಲಿತ ಪುದು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಅನಾರೋಗ್ಯದಿಂದ ನಿಧನರಾದ ಘಟನೆ ಬಂಟ್ವಾಳ ತಾಲೂಕಿನ ಮಾರಿಪಳ್ಳದಲ್ಲಿ ನಡೆದಿದೆ.

- Advertisement -

ಪುದು ಗ್ರಾಮ ಪಂಚಾಯತ್ ನ 10 ವಾರ್ಡಿನ ಸದಸ್ಯ ಹುಸೇನ್ ಪಾಡಿ (65) ಮೃತರು.

ಅನಾರೋಗ್ಯ ಹಿನ್ನೆಲೆ ಹುಸೇನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಇಂದು ಮೃತಪಟ್ಟಿದ್ದಾರೆ.

- Advertisement -

5 ಬಾರಿ ಪುದು ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಹುಸೇನ್ ಪಾಡಿ ಅವರು, ಮಾರಿಪಳ್ಳ ಜುಮಾ ಮಸೀದಿಯ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರು ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Join Whatsapp