ಪುದು ಗ್ರಾಪಂ ಚುನಾವಣೆ: ಭ್ರಷ್ಟಾಚಾರ ಮುಕ್ತ ಪಂಚಾಯತ್’ಗೆ ಮತದಾರರ ಒಲವು – ಮುನೀಶ್ ಬಂಟ್ವಾಳ

Prasthutha|

ಫರಂಗಿಪೇಟೆ: ಪುದು ಗ್ರಾಮ ಪಂಚಾಯತ್ ಚುನಾವಣೆ ಫೆಬ್ರವರಿ 25 ರಂದು ಶನಿವಾರ ನಡೆಯಲಿದೆ. ಕಳೆದ 35 ವರ್ಷಗಳಿಂದ ಒಂದೇ ಪಕ್ಷದ ಬೆಂಬಲಿತರು ಪುದು ಗ್ರಾಮ ಪಂಚಾಯತ್ ಆಡಳಿತ ನಡೆಸುತ್ತಿದ್ದರೂ ಗ್ರಾಮದ ಸರ್ವಾಂಗೀಣ ಅಭಿವೃದ್ಧಿ, ಪಾರದರ್ಶಕ, ಜನಸ್ನೇಹಿ ಆಡಳಿತ ನೀಡಲು ವಿಫಲವಾಗಿದೆ. ಈ ನಿಟ್ಟಿನಲ್ಲಿ ಪುದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮತದಾರರ ಒಲವು ಈ ಸಲ ಎಸ್.ಡಿಪಿಐ ಬೆಂಬಲಿತ ಅಭ್ಯರ್ಥಿಗೆ ದಕ್ಕಲಿದೆ. ಮಾತ್ರವಲ್ಲ 35 ವರ್ಷಗಳ ದುರಾಡಳಿತಕ್ಕೆ ವಿರಾಮ ಹಾಕಿ ಪರ್ಯಾಯವಾಗಿ ಎಸ್.ಡಿಪಿಐ ಬೆಂಬಲಿತ ಅಭ್ಯರ್ಥಿಗಳಿಗೆ ಮತದಾರ ಮಣೆ ಹಾಕಿ ಪಂಚಾಯತ್ ಅಧಿಕಾರ ನಡೆಸಲು ಮತದಾರರು ಅವಕಾಶ ಮಾಡಿಕೊಡಲಿದ್ದಾರೆ ಎಂದು ಎಸ್.ಡಿಪಿಐ ಚುನಾವಣಾ ಉಸ್ತುವಾರಿ ಮುನೀಶ್ ಬಂಟ್ವಾಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

- Advertisement -


34 ಸದಸ್ಯ ಸ್ಥಾನದ ಅತೀ ದೊಡ್ಡ ಪುದು ಗ್ರಾಮ ಪಂಚಾಯತ್ ನಲ್ಲಿ ಕುಡಿಯುವ ನೀರು, ಒಳ ಚರಂಡಿ, ನ್ಯಾಯ ಬೆಲೆಯ ಅಂಗಡಿಯ ವಿಸ್ತರಣೆ, ಸುರಕ್ಷಿತ ರೈಲ್ವೇ ಹಳಿ ಕ್ರಾಸ್, ಕಮಿಷನ್ ರಹಿತ ಜನಸ್ನೇಹಿ ಪಾರದರ್ಶಕ ಆಡಳಿತ ನೀಡುತ್ತೇವೆ ಎಂಬ ಭರವಸೆಯಲ್ಲಿ ಎಸ್ ಡಿಪಿಐ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿದೆ. ಈ ಸಲ ಮತ ಯಾಚನೆಗೆ ಮನೆ ಮನೆಗೆ ತೆರಳಿದ ಸಂದರ್ಭದಲ್ಲಿ ಬಹುತೇಕ ಮತದಾರರು ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿಗೆ ಒಲವು ವ್ಯಕ್ತಪಡಿಸಿದ್ದಾರೆ ಎಂದು ಮುನೀಶ್ ಬಂಟ್ವಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Join Whatsapp