ಬಂಟ್ವಾಳ: ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ಚುನಾವಣೆಯು ಘೋಷಣೆ ಹಿನ್ನೆಲೆಯಲ್ಲಿ ಎಸ್ ಡಿ ಪಿ ಐ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು.
ಎಸ್ ಡಿ ಪಿ ಐ ಪುದು ಗ್ರಾಮದ ನೂತನ ಕಚೇರಿಯನ್ನು ಎಸ್ ಡಿ ಪಿ ಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಉದ್ಘಾಟಿಸಿರು.
ಬಳಿಕ ಮಾತನಾಡಿದ ಅವರು “ಕಳೆದ ವರ್ಷದ ಪುದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡು ಎಸ್ ಡಿ ಪಿ ಐ ಯನ್ನು ಗುರಿಯಾಗಿಸಿ ಒಂದೇ ಸ್ಥಾನವನ್ನು ಗೆಲ್ಲುವ ಹಾಗೆ ಮಾಡಲಾಯಿತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಅದನ್ನೆಲ್ಲಾ ಮೆಟ್ಟಿನಿಂತು ನಾವು ವಿಜಯದ ಪತಾಕೆಯನ್ನು ಹಾರಿಸಬೇಕಾಗಿದೆ ಎಂದು ಕರೆ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಪ್ರಾಸ್ತಾವಿಕವಾಗಿ ನುಡಿದರು. ಎಸ್ ಡಿ ಪಿ ಐ ಬಂಟ್ವಾಳ ಕ್ಷೇತ್ರ ಸಮಿತಿ ಸದಸ್ಯ ಶಾಹುಲ್ ಹಮೀದ್ ಮಾತನಾಡಿ, “ಎಸ್ ಡಿ ಪಿ ಐ ಜನರಿಗೆ ಮಾಡಿರುವುದನ್ನು ಕಾಣಬೇಕಾದರೆ ಸಜಿಪ ಮುನ್ನೂರು, ಸಜೀಪ ನಡು, ಪಾವೂರು ಹಾಗೂ ಮಲ್ಲೂರು ಗ್ರಾಮ ಪಂಚಾಯತಿಗೆ ಭೇಟಿ ನೀಡಿ. ಎಸ್ ಡಿ ಪಿ ಐ ಸದಾ ಜನಸೇವೆಯಲ್ಲಿ ನಿರತವಾಗಿರುತ್ತದೆ” ಎಂದು ಹೇಳಿದರು.
ಪುದು ಗ್ರಾಮ ಪಂಚಾಯತ್ ಚುನಾವಣೆ ಉಸ್ತುವಾರಿ ಹಾಗೂ ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಮುನಿಶ್ ಆಲಿ ಬಂಟ್ವಾಳ ಮಾತನಾಡಿ “34 ಸ್ಥಾನಗಳಲ್ಲಿ 28 ಸ್ಥಾನವನ್ನು ಎಸ್ ಡಿಪಿಐ ಸ್ಪರ್ಧಿಸಲಿದೆ. ಈಗ ನಾವು 8 ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ. ಇನ್ನು ಉಳಿದ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸುಹೈಲ್ ಫಳ್ನೀರ್, ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಮದ್ದ, ಕ್ಷೇತ್ರ ಸಮಿತಿ ಸದಸ್ಯ ಮುಸ್ತಾಕ್ ತಲಪಾಡಿ, ಸಂಗಬೆಟ್ಟು ಬ್ಲಾಕ್ ಅಧ್ಯಕ್ಷ ಇರ್ಫಾನ್ ತುಂಬೆ, ಪುದು ಗ್ರಾಮ ಪಂಚಾಯತಿ ಸದಸ್ಯ ನಜೀರ್ ಹಾಗೂ ಸಮಿತಿ ಸದಸ್ಯ ಇಕ್ಬಾಲ್ ಅಮ್ಮೆಮಾರ್ ಉಪಸ್ಥಿತರಿದ್ದರು.
ಪುದು ಗ್ರಾಮ ಸಮಿತಿ ಅಧ್ಯಕ್ಷ ಶಾಫೀ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.