ಫರಂಗಿಪೇಟೆ: ಪುದು ಗ್ರಾಮ ಪಂಚಾಯತ್ 10 ನೇ ವಾರ್ಡ್ ಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಇಕ್ಬಾಲ್ ಪಾಡಿ ಜಯ ಗಳಿಸಿದ್ದಾರೆ.
10 ನೇ ವಾರ್ಡ್ ನ ಸದಸ್ಯರಾದ ಹುಸೈನ್ ಪಾಡಿ ಮರಣ ಹೊಂದಿದ ಹಿನ್ನಲೆಯಲ್ಲಿ ಜುಲೈ 23 ರಂದು ನಡೆದ ಉಪಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಇಕ್ಬಾಲ್ ಪಾಡಿ 385 ಮತ ಪಡೆದು ವಿಜೇತರಾಗಿದ್ದಾರೆ. ಇವರು ಮರಣ ಹೊಂದಿದ ಹುಸೈನ್ ಪಾಡಿ ರವರ ಪುತ್ರನಾಗಿದ್ದಾನೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಶ್ರಫ್ 140 ಮತ ಪಡೆದರೆ, ಎಸ್’ಡಿಪಿಐ ಬೆಂಬಲಿತ ಅಭ್ಯರ್ಥಿ ಲೆತೀಫ್ 39 ಮತ ಪಡೆದು ಪರಾಭವಗೊಂಡಿದ್ದಾರೆ.
ಮರಣ ಹೊಂದಿದ ಪಂಚಾಯತ್ ಸದಸ್ಯ ಹುಸೈನ್ ಪಾಡಿ ರವರು ಈ ವಾರ್ಡಿನಲ್ಲಿ ಎಲ್ಲರೊಂದಿಗೆ ಬೆರೆತು ಉತ್ತಮ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದರು. ಇವರ ಮಗ ಇಕ್ಬಾಲ್ ಈಗ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಕ್ಷೇತ್ರದ ಶಾಸಕರಾದ ಯುಟಿ ಖಾದರ್ ಮತ್ತು ಪುದು ಗ್ರಾಮ ಪಂಚಾಯತ್ ಕೈಗೊಂಡ ಅಭಿವೃದ್ಧಿ ಹಾಗೂ ಸರಕಾರದ ಜನಪರ ಯೋಜನೆಗಳಾಗಿವೆ ಎಂದು ಪುದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯ ರಮ್ಲಾನ್ ಮಾರಿಪಳ್ಳ ಹೇಳಿದ್ದಾರೆ. ಇನ್ನು ಗೆಲುವಿಗೆ ಸಹಕರಿಸಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಕೆಪಿಸಿಸಿ ಸದಸ್ಯ ಉಮರ್ ಫಾರೂಕ್, ಪುದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮುಹಮ್ಮದ್ ಇಕ್ಬಾಲ್ ಸುಜೀರ್, ಪುದು ವಲಯಾಧ್ಯಕ್ಷೆ ದಿಲ್ ಶಾದ್, ಇಸ್ಮಾಯಿಲ್ ಕೆ.ಎಲ್, ಹಕೀಮ್ ಮಾರಿಪಳ್ಳ ಇವರಿಗೆ ಧನ್ಯಾವಾದ ತಿಳಿಸಿದ್ದಾರೆ.