ಕಬಡ್ಡಿ ಆಡುತ್ತಿದ್ದ ಪಿಯುಸಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

Prasthutha|

ಆನೇಕಲ್: ಕಬಡ್ಡಿ ಆಡುತ್ತಿದ್ದ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಆನೇಕಲ್ ನಲ್ಲಿ ನಡೆದಿದೆ.

- Advertisement -


ಬೆಂಗಳೂರು ನಗರ ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆಯ ಖಾಸಗಿ ಕಾಲೇಜು ವಿದ್ಯಾರ್ಥಿನಿ ಸಂಗೀತಾ ಮೃತ ವಿದ್ಯಾರ್ಥಿನಿ.


ಸಂಗೀತಾ ಧಾರವಾಡ ಮೂಲದವಳಾಗಿದ್ದು, ತಾನು ಕಲಿಯುತ್ತಿದ್ದ ಕಾಲೇಜಿನ ಮಹಿಳಾ ಕಬಡ್ಡಿ ತಂಡದಲ್ಲಿದ್ದಳು. ಕಾಲೇಜಿನಲ್ಲಿ ಕ್ರೀಡಾ ಉತ್ಸವ ಆಯೋಜನೆ ಮಾಡಿದ್ದು ಈ ವೇಳೆ ಕಬಡ್ದಿ ಆಡುತ್ತಿರುವಾಗ ಕುಸಿದು ಬಿದ್ದ ಈಕೆಯನ್ನುಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ.

Join Whatsapp