ದ್ವಿತೀಯ ಪಿಯುಸಿ ಫಲಿತಾಂಶ: ಒಂದೇ ಊರಿನ ಐವರು ಮುಸ್ಲಿಂ ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್’ನಲ್ಲಿ ಉತ್ತೀರ್ಣ

Prasthutha|

- Advertisement -

ಕುಂದಾಪುರ; ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಂದೇ ಊರಿನ ಐವರು ಮುಸ್ಲಿಂ ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿ ಊರಿಗೂ, ಕಾಲೇಜಿಗೂ ಗೌರವ ತಂದಿದ್ದಾರೆ.


ಕುಂದಾಪುರದ ಕಂಡ್ಲೂರು ನಿವಾಸಿಗಳಾದ ಅಕ್ಸಾ ಮೆಹ್’ವಿಶ್, ಸುಹಾ ಅನ್ಮೋಳ್, ಇರಮ್ ಇಲ್ಯಾಸ್ ಶೇಖ್, ಅಸ್ಬಾ ಎಂ, ಹಾಗೂ ನಿಮ್ರಾ ಶಿಫಾ ಅವರು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.
ಗಂಗೊಳ್ಳಿಯ ಗರ್ಲ್ಸ್ ಪಿಯು ಕಾಲೇಜಿನ ಅಕ್ಸಾ ಮೆಹ್’ವಿಶ್ ಅವರು ವಾಣಿಜ್ಯ ವಿಭಾಗದಲ್ಲಿ 589 ಅಂಕಗಳನ್ನು ಪಡೆದು ಶೇಕಡ 98.16 ಫಲಿತಾಂಶ ಪಡೆದಿದ್ದಾರೆ. ಇವರು ಶೇಖ್ ಮುಹಮ್ಮದ್ ರಿಝ್ವಾನ್ ನದ್ಬಿ ಹಾಗೂ ರೀನಾ ಝೈನ್ ದಂಪತಿಯ ಪುತ್ರಿಯಾಗಿದ್ದಾಳೆ.

- Advertisement -


ಕೋಡಿ ಕುಂದಾಪುರ ಬ್ಯಾರಿಸ್ ಕಂಪೋಸಿಟ್ ಪ್ರೀ ಯೂನಿವರ್ಸಿಟಿ ಕಾಲೇಜಿನ ಸುಹಾ ಆನ್ಮೋಳ್ ಅವರು ವಾಣಿಜ್ಯ ವಿಭಾಗದಲ್ಲಿ 575 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಾಸಿಂ ಮುಹಮ್ಮದ್ ಸಾದಿಕ್ ಹಾಗೂ ಸೀಮಾ ದಂಪತಿಯ ಪುತ್ರಿಯಾಗಿದ್ದಾಳೆ.
ಉಡುಪಿಯ ಜ್ಞಾನಸುಧಾ ಕಾಲೇಜಿನ ಇರಮ್ ಇಲ್ಯಾಸ್ ಶೇಕ್ ಅವರು ವಿಜ್ಞಾನ ವಿಭಾಗದಲ್ಲಿ 578 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಎಚ್ ಎಸ್ ಇಲ್ಯಾಸ್ ಮತ್ತು ರಹ್ಮತುನ್ನಿಸಾ ದಂಪತಿಯ ಪುತ್ರಿ.


ಕುಂದಾಪುರ ಕೋಟ ವಿವೇಕಾನಂದ ಪಿಯು ಕಾಲೇಜಿನ ಅಸ್ಬಾ ಎಂ ವಾಣಿಜ್ಯ ವಿಭಾಗದಲ್ಲಿ 586 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮುಕ್ತಿಸರ್ ಅನ್ಸಾರ್ ಹಾಗೂ ರೇಷ್ಮಾ ದಂಪತಿಯ ಪುತ್ರಿಯಾಗಿದ್ದಾರೆ. ಕುಂದಾಪುರ ಆರ್ ಎನ್ ಶೆಟ್ಟಿ ಕಾಲೇಜಿನ ವಿದ್ಯಾರ್ಥಿನಿ ನಿಮ್ರಾ ಶಿಫಾನ್, ವಿಜ್ಞಾನ ವಿಭಾಗದಲ್ಲಿ 581 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಎಸ್ ಮುನೀರ್ ಅಹ್ಮದ್ ಹಾಗೂ ಎಸ್. ಮುನಾವರ ದಂಪತಿಯ ಪುತ್ರಿಯಾಗಿದ್ದಾರೆ.


ವಿದ್ಯಾರ್ಥಿನಿಯರ ಸಾಧನೆಗೆ ಊರಿನ ಮುಖಂಡರು, ಕಾಲೇಜು ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು ಅಭಿನಂದನೆ ಸಲ್ಲಿಸಿದ್ದಾರೆ.








Join Whatsapp