ಉಳಾಯಿಬೆಟ್ಟು: ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳಾಯಿಬೆಟ್ಟು -ಮಂಗಳೂರು ಸಂಪರ್ಕಿಸುವ ಕಿರುಸೇತುವೆ ಸುಮಾರು 80 ವರ್ಷದಷ್ಟು ಹಳೆಯದಾಗಿದ್ದು, ಇದೀಗ ಸುರಿಯುತ್ತಿರುವ ಭಾರಿ ಮಳೆಗೆ ಕುಸಿಯುವ ಭೀತಿಯಲ್ಲಿದ್ದು, ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರು.
ಉಳಾಯಿಬೆಟ್ಟು ಸಂಪರ್ಕಿಸಲು ಇದೊಂದು ರಸ್ತೆಯಿರುವುದರಿಂದ ಆದಷ್ಟು ಬೇಗ ಸರಿಪಡಿಸುವಂತೆ ಪಂಚಾಯತ್ ಸದಸ್ಯರಾದ ಅಝರ್ ಉಳಾಯಿಬೆಟ್ಟು ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಎಸ್.ಡಿ.ಪಿ.ಐ ಮಂಗಳೂರು ಉತ್ತರ ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ನಾಸಿರ್ ಉಳಾಯಿಬೆಟ್ಟು,ಗ್ರಾಮ ಸಮಿತಿ ಅಧ್ಯಕ್ಷ ಇಕ್ಬಾಲ್ ಉಳಾಯಿಬೆಟ್ಟು , ಕಾರ್ಯದರ್ಶಿ ಸಲಾಂ ಉಳಾಯಿಬೆಟ್ಟು, ಆಮೀರ್ ಉಳಾಯಿಬೆಟ್ಟು ಹಾಗೂ ಹಿರಿಯ ನಾಗರಿಕರು ಉಪಸ್ಥಿತರಿದ್ದರು,