ಪಬ್’ಜಿ ಲವ್ ಸ್ಟೋರಿ: ಪಾಕ್ ಪ್ರಜೆ ಸೀಮಾರಿಂದ 2 ವಿಡಿಯೋ ಕ್ಯಾಸೆಟ್, 4 ಫೋನ್, 6 ಪಾಸ್​​​ಪೋರ್ಟ್ ವಶಕ್ಕೆ

Prasthutha|

ಹೊಸದಿಲ್ಲಿ: ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿ ದಿನದಿಂದ ದಿನಕ್ಕೆ ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. ಈ ಮಧ್ಯೆ, ಆಕೆಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿರುವ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಸೀಮಾ ಹೈದರ್​ರಿಂದ ಎರಡು ವಿಡಿಯೋ ಕ್ಯಾಸೆಟ್‌ಗಳು, ನಾಲ್ಕು ಮೊಬೈಲ್ ಫೋನ್‌ಗಳು, ಐದು ಪಾಕಿಸ್ತಾನಿ ಪಾಸ್‌ಪೋರ್ಟ್‌ಗಳು ಮತ್ತು ಒಂದು ಅಪೂರ್ಣ ಪಾಸ್‌ಪೋರ್ಟ್ (ಬಳಕೆಯಾಗದ ಮತ್ತು ಹೆಸರು/ವಿಳಾಸ ಇಲ್ಲದ) ವಶಪಡಿಸಿಕೊಳ್ಳಲಾಗಿದೆ ಎಂದು ಬುಧವಾರ ತಿಳಿಸಿದೆ.

- Advertisement -

ವಶಪಡಿಸಿಕೊಂಡ ವಸ್ತುಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ನಮ್ಮ ಬಳಿ ಸಾಕಷ್ಟು ಪುರಾವೆ ಇಲ್ಲದೇ ಆಕೆ ಗೂಢಚಾರಿಕೆಗೆ ಬಂದವಳು’ ಎಂದು ಹೇಳುವುದು ಸೂಕ್ತವಲ್ಲ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಸೋಮವಾರ ಮತ್ತು ಮಂಗಳವಾರ ಸೀಮಾ ಅವರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ವಿಚಾರಣೆಗೆ ಒಳಪಡಿಸಿದೆ.

ಸೀಮಾ ಆನ್‌ಲೈನ್ ಗೇಮ್ ಪಬ್​​ಜಿ ಮೂಲಕ 2020 ರಲ್ಲಿ ಭಾರತೀಯ ಪ್ರಜೆ ಸಚಿನ್ ಮೀನಾ ಅವರೊಂದಿಗೆ ಸಂಪರ್ಕಕ್ಕೆ ಬಂದರು. ಸುಮಾರು 15 ದಿನಗಳ ಕಾಲ ಗೇಮ್ ಆಡಿದ ನಂತರ, ಇಬ್ಬರೂ ತಮ್ಮ ನಂಬರ್‌ಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಹೆಚ್ಚಿನ ಸಂವಹನಕ್ಕಾಗಿ ವಾಟ್ಸಾಪ್‌ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡಿದ್ದರು. ನಂತರ ಅವರಿಬ್ಬರೂ ಪರಸ್ಪರ ಪ್ರೀತಿಸತೊಡಗಿದರು.

ತನ್ನ ಪ್ರೇಮಿಯೊಂದಿಗೆ ಒಂದಾಗಲು ಸೀಮಾ ತನ್ನ ಮಕ್ಕಳೊಂದಿಗೆ ನೇಪಾಳ ಮತ್ತು ದುಬೈ ಮೂಲಕ ಭಾರತವನ್ನು ಪ್ರವೇಶಿಸಿದ್ದರು. ಸೀಮಾ ಅವರ ಪಾಕಿಸ್ತಾನಿ ಪತಿ ಧುಲಾಮ್ ಹೈದರ್ 2019 ರಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

Join Whatsapp