ಪಬ್ ನಲ್ಲಿ ಹಲ್ಲೆ: ಸುನಾಮಿ ಕಿಟ್ಟಿ ಸೇರಿ ಹಲವರ ವಿರುದ್ಧ ಎಫ್ಐಆರ್

Prasthutha|

ಬೆಂಗಳೂರು: ಕಿರುತೆರೆ ರಿಯಾಲಿಟಿ ಶೋ ಖ್ಯಾತಿಯ ಸುನಾಮಿ ಕಿಟ್ಟಿ ಹಾಗೂ ಆತನ ಸ್ನೇಹಿತನ ವಿರುದ್ಧ ಕಬ್ಬನ್ ಪಾರ್ಕ್ ನ ಪ್ರತಿಷ್ಠಿತ ಪಬ್ ನಲ್ಲಿ ಜಗಳವಾಡಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

- Advertisement -

ಸುನಾಮಿ ಕಿಟ್ಟಿ, ಆತನ ಗೆಳೆಯ ಚೇತನ್ ಗೌಡ ಹಾಗೂ ಸ್ನೇಹಿತರು ಕಬ್ಬನ್ ಪಾರ್ಕ್ ಮಿರಾಜ್ ಪಬ್ ಗೆ ತೆರಳಿದ್ದು, ಮದ್ಯಪಾನ ಮಾಡಿದ ಬಳಿಕ ಶಾಂಪೇನ್ ಬಾಟೆಲ್ ಒಪನ್ ಮಾಡಿದ್ದು ಅದರಲ್ಲಿದ್ದ ಮದ್ಯ ಪಕ್ಕದಲ್ಲಿದ್ದವರ ಮೇಲೂ ಚೆಲ್ಲಿದ್ದು, ಕೃಷ್ಣ ಮತ್ತು ಪ್ರಶಾಂತ್ ಎನ್ನುವವರು ಇದನ್ನು ಪ್ರಶ್ನಿಸಿದ್ದಾರೆ.

ಇದೇ ವಿಚಾರಕ್ಕೆ ಜಗಳ ತೆಗೆದ ಸುನಾಮಿ ಕಿಟ್ಟಿ ಹಾಗೂ ಚೇತನ್ ಗೌಡ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಾರೆ ಎಂದು ಕೃಷ್ಣ ಮತ್ತು ಪ್ರಶಾಂತ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

- Advertisement -

ಇನ್ನು ಅಪರಿಚಿತ ವ್ಯಕ್ತಿಗಳು ನಮ್ಮ ಜೊತೆಗೆ ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಚೇತನ್ ಗೌಡ ಕೂಡ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಎರಡೂ ದೂರುಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.



Join Whatsapp