ಮಹಿಳಾ ಪಿಎಸ್ ಐ ಅಸಹಜ ಸಾವು | ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

Prasthutha|

ಲಖನೌ : ಉತ್ತರ ಪ್ರದೇಶದ ಮೀರತ್ ಮೂಲದ ಮಹಿಳಾ ಪಿಎಸ್ ಐ ಒಬ್ಬರ ಮೃತದೇಹವು ಬುಲಂದ್ ಶಹರ್ ಜಿಲ್ಲೆಯ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.

- Advertisement -

ಆರ್ಜೊ ಪವಾರ್ ಮೃತರಾದ ಪಿಎಸ್ ಐ. ಆರ್ಜೊ ಅವರು ಅನೂಪ್ ಶಹರ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮನೆಯ ಬಾಗಿಲು ಬಡಿದರೂ ತೆಗೆಯದ್ದನ್ನು ನೋಡಿ, ಮನೆಯ ಮಾಲಕಿ ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.

ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ತನ್ನ ಸಾವಿಗೆ ತಾನೇ ಕಾರಣ ಎಂದು ಬರೆದಿರುವುದಾಗಿ ವರದಿಗಳು ತಿಳಿಸಿವೆ. ಬೆಡ್ ಮೇಲೆ ಡೆತ್ ನೋಟ್ ಮತ್ತು ಪೆನ್ ಪತ್ತೆಯಾಗಿದ್ದು, ಪೊಲೀಸರು ಅವುಗಳನ್ನು ವಶಕ್ಕೆ ಪಡೆದಿದ್ದಾರೆ. ಡೆತ್ ನೋಟ್ ಬಗ್ಗೆ ಅನುಮಾನಗಳು ಮೂಡಿವೆ ಎಂದು ವರದಿಯೊಂದು ತಿಳಿಸಿದೆ. ಮೊಬೈಲ್ ಫೋನ್ ಕೂಡ ವಶಪಡಿಸಿಕೊಂಡಿರುವ ಪೊಲೀಸರು, ಕೊನೆಯದಾಗಿ ಯಾರಿಗೆ ಫೋನ್ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಲಿದ್ದಾರೆ.

- Advertisement -



Join Whatsapp