ಧಾರವಾಡ: ದರೋಡೆಕೋರರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ‌ ಹಿಡಿದ ಪಿಎಸ್ಐಗೆ ಮೆಚ್ಚುಗೆ

Prasthutha|

ಧಾರವಾಡ: ಬೈಕ್‌ ನಿಲ್ಲಿಸಿ ವ್ಯಕ್ತಿಯನ್ನು ದೋಚಿ ಪರಾರಿಯಾದ ಇಬ್ಬರು ದರೋಡೆಕೋರರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ‌ ಹಿಡಿದ ಘಟನೆ ನಡೆದಿದೆ.

- Advertisement -

ಅಳ್ನಾವರ ರಸ್ತೆಯ ಮಂಡಿಹಾಳ ಗ್ರಾಮದ ಹತ್ತಿರ 4 ಜನ ದರೋಡೆಕೋರರು ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ನಿಲ್ಲಿಸಿ, ಅವರ ಮೊಬೈಲ್, ಹಣದ ಪರ್ಸ್ ದೋಚಿಕೊಂಡು ಹೊರಟಿದ್ದರು. ಸ್ಥಳೀಯರು ಕೂಡಲೇ ಮಹಿಳಾ ಪಿಎಸ್ಐ ರೇಣುಕಾ ಐರಾಣಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪಿಎಸ್ಐ ರೇಣುಕಾ ಐರಾಣಿ ತಂಡದೊಂದಿಗೆ ತಮ್ಮ ಸ್ವಂತ ಕಾರಲ್ಲಿ ಘಟನಾ ಸ್ಥಳಕ್ಕೆ ಧಾವಿಸಿ ದರೋಡೆಕೋರರನ್ನು ಹಿಂಬಾಲಿಸಿ 2 ಜನ ದರೋಡೆಕೋರರನ್ನು ಬಂಧಿಸಿದ್ದಾರೆ.

ಪಿಎಸ್ಐ ರೇಣುಕಾ ಐರಾಣಿ ಕರ್ತವ್ಯ ನಿಷ್ಠೆ ಮತ್ತು ದೈರ್ಯವನ್ನು ಶ್ಲಾಘಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಬಹುಮಾನವನ್ನು ನೀಡಿ ಗೌರವಿಸಿದ್ದಾರೆ.

- Advertisement -

Join Whatsapp