ಪಿಎಸ್ ಐ ಮರು ಪರೀಕ್ಷೆ; ಆದೇಶ ಪ್ರತಿ ಕೈ ಸೇರಿದ ಬಳಿಕ ಮುಂದಿನ ಹೆಜ್ಜೆ: ಪರಮೇಶ್ವರ್

Prasthutha|

ಬೆಂಗಳೂರು: ಪಿಎಸ್ ಐ ಮರು ಪರೀಕ್ಷೆ ನಡೆಸುವಂತೆ ಹೈಕೋರ್ಟ್ ನ ಆದೇಶದ ಸಂಪೂರ್ಣ ಪ್ರತಿಯನ್ನು ನಾನು ನೋಡಿಲ್ಲ. ನಮ್ಮ ಅಡ್ವೊಕೇಟ್ ಜನರಲ್ ಜೊತೆ ಫೋನ್ ನಲ್ಲಿ ಮಾತಾಡಿದ್ದೇನೆ. ಸ್ವತಂತ್ರ ಸಂಸ್ಥೆಯಿಂದ ಬೇಗ ಪರೀಕ್ಷೆ ನಡೆಸಲು ಕೋರ್ಟ್ ಹೇಳಿದೆ. ಮುಂದಿನ ಸೋಮವಾರ ಅಥವಾ ಮಂಗಳವಾರ ಆದೇಶ ಪ್ರತಿ ಕೈ ಸೇರಲಿದೆ. ತದನಂತರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ಪರೀಕ್ಷಾರ್ಥಿಗಳು ಓದಲು ಸಮಯ ಕೊಡಿ ಅಂತಿದ್ದಾರೆ. ಅದನ್ನು ಪರಿಗಣಿಸುತ್ತೇವೆ .
ನೇಮಕಾತಿ ಬಳಿಕ ಅವರಿಗೆ ತರಬೇತಿ ನೀಡಲು 1 ವರ್ಷ ಆಗಲಿದೆ. ರೂಲ್ 32ರಲ್ಲಿ 500 ರಿಂದ 600 ಎಎಸ್ ಐಗಳಿಗೆ ಬಡ್ತಿ ನೀಡಿದ್ದೇವೆ. 545 ಹುದ್ದೆಗಳ ಜೊತೆಗೆ ಇನ್ನೂ 400 ಪಿಎಸ್ ಐ ಹುದ್ದೆಗಳು ಖಾಲಿಯಿವೆ. ಎರಡನ್ನೂ ಒಟ್ಟಿಗೆ ಮಾಡಬೇಕಾ ಅಥವಾ ಪ್ರತ್ಯೇಕವಾಗಿ ನಡೆಸಬೇಕೆಂದು ಚರ್ಚೆ ನಡೆಸುತ್ತಿದ್ದೇವೆ ಎಂದರು.



Join Whatsapp