ಪಿಎಸ್ಐ ಅಕ್ರಮ ನೇಮಕಾತಿ; ಶಾಸಕರ ಗನ್ ಮ್ಯಾನ್ ಸಹಿತ ಇಬ್ಬರು ಅರೆಸ್ಟ್

Prasthutha|

ಕಲಬುರಗಿ: ಪಿಎಸ್ಐ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಅಫಜಲ್ ಪುರ ಶಾಸಕ ಎಂ.ವೈ.ಪಾಟೀಲ ಅವರ ಗನ್ ಮ್ಯಾನ್ ಹಯ್ಯಾಳಿ  ದೇಸಾಯಿ ಹಾಗೂ ಸಿಎಆರ್ ಪೊಲೀಸ್ ಕಾನ್ ಸ್ಟೆಬಲ್ ರುದ್ರಗೌಡ ಪಾಟೀಲ ಎಂಬವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

- Advertisement -

ಶಾಸಕರೊಂದಿಗೆ ಕಾರಿನಲ್ಲಿ ನಗರದ ರಾಮಮಂದಿರ ಬಳಿ ಹೊರಟಿದ್ದಾಗ ಸಿಐಡಿ ಪೊಲೀಸರು ಗನ್ ಮ್ಯಾನ್ ಹಯ್ಯಾಳಿಯನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಗನ್ ಮ್ಯಾನ್ ಹಯ್ಯಾಳಿ ದೇಸಾಯಿ ಪಿಎಸ್ಐ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಆಯ್ಕೆಯಾಗಿದ್ದ ಎಂದು ತಿಳಿದು ಬಂದಿದೆ.

Join Whatsapp