ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ; ಕೊನೆಯ ದಿನಾಂಕ ಯಾವಾಗ?

Prasthutha|

►ಏನಲ್ಲಾ ಬದಲಾವಣೆಗೆ ಅವಕಾಶ?

- Advertisement -

ಬೆಂಗಳೂರು: ರೇಷನ್ ಕಾರ್ಡ್ ತಿದ್ದುಪಡಿಗೆ ಕರ್ನಾಟಕ ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯು ಅವಕಾಶ ನೀಡಿದೆ. ಆಗಸ್ಟ್ 10 ಕೊನೆಯ ದಿನವಾಗಿದ್ದು, ಅಷ್ಟರೊಳಗೆ ಅರ್ಜಿ ಸಲ್ಲಿಸಿ ಬದಲಾವಣೆ ಮಾಡಿಕೊಳ್ಳಬಹುದು.


ಈ ಕುರಿತು ಮಾಹಿತಿ ನೀಡಿರುವ ಇಲಾಖೆಯು, ಪಡಿತರ ಚೀಟಿ (ರೇಷನ್ ಕಾರ್ಡ್) ಹೊಂದಿರುವವರು ಅದರಲ್ಲಿ ತಿದ್ದುಪಡಿ ಮಾಡಿಕೊಳ್ಳುವ ಸಂಬಂಧ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಗಸ್ಟ್ 10 ರವರೆಗೆ ಅವಕಾಶವಿದೆ. ರೇಷನ್ ಕಾರ್ಡುದಾರರು ಈ ಸೌಲಭ್ಯವನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.

- Advertisement -


ಏನಲ್ಲಾ ಬದಲಾವಣೆಗೆ ಅವಕಾಶ?
• ಕುಟುಂಬ ಸದಸ್ಯರ ಹೆಸರು ತಿದ್ದುಪಡಿ.
• ಮನೆ ಯಜಮಾನರ ಬದಲಾವಣೆ
• ಹೊಸ ಸದಸ್ಯರ ಸೇರ್ಪಡೆ
• ವಿಳಾಸ ಬದಲಾವಣೆ
• ಮೃತರ ಅಥವಾ ಬೇರೆ ಕುಟುಂಕ್ಕೆ ಸೇರಿದವರ ಹೆಸರು ತೆಗೆಯುವುದು.
• ಫೋಟೋ ಮತ್ತು ಬಯೋಮೆಟ್ರಿಲ್ ಅಪ್ಡೇಟ್


ಯಾವೆಲ್ಲಾ ದಾಖಲೆಗಳು ಬೇಕು?
ಅರ್ಜಿದಾರರು ಆಧಾರ್ ಕಾರ್ಡ್ ಪ್ರತಿ, ಹೊಸ ಹೆಸರು ಸೇರ್ಪಡೆಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ, ಹಾಲಿ ಪಡಿತರ ಚೀಟಿ ದಾಖಲೆ ಇಟ್ಟುಕೊಂಡಿರಬೇಕು.



Join Whatsapp