ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿ: ಶಾಸಕ ಬಂಡೆಪ್ಪ ಖಾಶೆಂಪುರ್

Prasthutha|

ಬೆಂಗಳೂರು: ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಗ್ರಾಮೀಣ ಭಾಗದಲ್ಲಿರುವ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಬೇಕು. ನೆಟೆ ರೋಗದಿಂದ ಬೆಳೆ ಕಳೆದುಕೊಂಡಿರುವ ರೈತರಿಗೆ ನೀಡುತ್ತಿರುವ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ಎಂಬ ಹತ್ತು ಹಲವು ವಿಷಯಗಳ ಬಗ್ಗೆ ಮಾಜಿ ಸಚಿವ, ಜೆಡಿಎಸ್ ಶಾಸಕಾಂಗ ಪಕ್ಷದ ಬಂಡೆಪ್ಪ ಖಾಶೆಂಪುರ್  ಸದನದ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.

- Advertisement -

ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ನಡೆದ ಬಜೆಟ್ ಅಧಿವೇಶನದ ಏಳನೇ ದಿನದ ಕಲಾಪದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೀದರ್’ನಲ್ಲಿ ನಾವೆಲ್ಲರೂ ಬೋರ್’ವೆಲ್ ಆಧಾರಿತ ನೀರು ಕುಡಿಯುತ್ತಿದ್ದೇವೆ. ನನ್ನ ಕ್ಷೇತ್ರದಲ್ಲಿ ನೂರಕ್ಕೂ ಹೆಚ್ಚು ಹಳ್ಳಿಗಳು ಬರುತ್ತವೆ. ಅವುಗಳ ಪೈಕಿ ಕೇವಲ 18 ಹಳ್ಳಿಗಳು ಮಾತ್ರ ಮಲ್ಟಿ ವಿಲೇಜ್ ಸ್ಕೀಮ್ ವ್ಯಾಪ್ತಿಯಲ್ಲಿವೆ ಎಂದರು.

ಮಲ್ಟಿ ವಿಲೇಜ್ ಸ್ಕೀಮ್’ಗೆ ಸಂಬಂಧಿಸಿದ ಇನ್ನೂ ಎರಡು ಪ್ರಸ್ತಾವನೆಗಳು ಬಾಕಿಯಿವೆ. 80 ಹಳ್ಳಿಗಳಲ್ಲಿ ಈಗಾಗಲೇ ಜೆಜೆಎಂ ವರ್ಕ್ ನಡೆಯುತ್ತಿದೆ. ಆದರೆ ಅಲ್ಲಿ ನೀರಿನ ಸೋರ್ಸ್ ಇಲ್ಲ. ಕಾರಂಜಾದಿಂದ ಸೋರ್ಸ್ ಪಡೆದುಕೊಳ್ಳಲು ಎಮ್ವಿಎಸ್ ತಗೊಂಡಿಲ್ಲ. ಆದಷ್ಟು ಬೇಗ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಮನವಿ ಮಾಡಿದರು.

- Advertisement -

ನಾವು ಸೋರ್ಸ್ ಆಧಾರಿತವಾಗಿಯೇ ಕ್ರಮಕೈಗೊಂಡಿದ್ದೇವೆ. ಬೀದರ್ ಜಿಲ್ಲೆಯಲ್ಲಿ ಕಾರಂಜಾದಿಂದಲೇ ನೀರು ಪಡೆದುಕೊಳ್ಳಬೇಕಾಗುತ್ತದೆ. ಪಡೆದುಕೊಳ್ಳುತ್ತೇವೆ. ಇದರಲ್ಲಿ ಯಾವುದೇ ರೀತಿಯ ಅನುಮಾನವೇ ಬೇಡ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಭರವಸೆ ನೀಡಿದರು.

ನೆಟೆ ರೋಗದ ಪರಿಹಾರ ಹೆಚ್ಚಿಸಿ:

ನೆಟೆ ರೋಗದಿಂದ ನಾಶವಾದ ತೊಗರಿ ಬೆಳೆಗೆ ಹೆಕ್ಟರ್ ಗೆ 10 ಸಾವಿರ ರೂ. ಪರಿಹಾರ ನೀಡಲಾಗ್ತಿದೆ. ಒಂದು ಕ್ವಿಂಟಲ್ ತೊಗರಿ ಬೆಲೆ 9000 ರೂ. ಇರುವುದರಿಂದ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಸಾರಿಗೆ ವ್ಯವಸ್ಥೆ ಸುಧಾರಣೆ ಮಾಡಬೇಕಾಗಿದೆ.

ನಮ್ಮ ಗಡಿ ಭಾಗದಲ್ಲಿ ಆಸ್ಪತ್ರೆ ವ್ಯವಸ್ಥೆ ಸುಧಾರಣೆಯಾಗಬೇಕಾಗಿದೆ. ಬೀದರ್ ನಲ್ಲಿರುವ ಕ್ಯಾತ್ ಲ್ಯಾಬ್ ಕಾರ್ಯಾರಂಭ ಮಾಡುವಂತೆ ಮಾಡಬೇಕಾಗಿದೆ. ಎಸ್ಸಿ, ಎಸ್ಟಿ ಗಂಗಾಕಲ್ಯಾಣ ಯೋಜನೆಯ ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸಬೇಕಾಗಿದೆ. ಒಂದು ಉತ್ಪಾದನೆ ಒಂದು ಜಿಲ್ಲೆ ಎಂಬ ಯೋಜನೆಯಡಿಯಲ್ಲಿ ಪರಿಣಾಮಕಾರಿಯಾದ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ನಮ್ಮಲ್ಲಿ ಜಿಂಜರ್ ಬೆಳೆಯಲಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಕೈಗಾರಿಕೆ ಸ್ಥಾಪನೆಯಾಗಿಲ್ಲ. ಆ ಕಡೆಗೂ ಗಮನಹರಿಸಬೇಕು.

ಗುರಮಠಕಲ್ ನಲ್ಲಿ ಇತ್ತಿಚ್ಛೆಗೆ ಕಲುಷಿತ ನೀರು ಕುಡಿದು ಮೃತಪಟ್ಟವರ ಕುಟುಂಬಗಳಿಗೆ ಕೂಡಲೇ ಪರಿಹಾರ ಒದಗಿಸಿಬೇಕು. ನಮ್ಮ ಬೇಡಿಕೆಗಳನ್ನು ಇದೆ ಬಜೆಟ್ ನಲ್ಲಿ ಅನುಷ್ಠಾನಕ್ಕೆ ತರಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಗುರಮಠಕಲ್ ಪ್ರಕರಣಕ್ಕೆ ಪರಿಹಾರ ಒದಗಿಸುವ ಕೆಲಸ ಮಾಡುತ್ತೇನೆ. ಜೆಜೆಎಂಗೆ ಸಂಬಂಧಿಸಿದಂತೆ ಮತ್ತು ಇತರೆ ಬೇಡಿಕೆಗಳಿಗೆ ಪರಿಹಾರ ಒದಗಿಸುವ ಕೆಲಸ ನಾನು ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದರು.



Join Whatsapp