ಕುರ್ ಆನ್ ದಹನ ವಿರೋಧಿಸಿ ಸ್ವೀಡನ್ ನಗರದಲ್ಲಿ ಭುಗಿಲೆದ್ದ ಪ್ರತಿಭಟನೆ

Prasthutha|

ಹೆಲ್ಸಿಂಕಿ: ಇಸ್ಲಾಂ-ವಿರೋಧಿ ಬಲಪಂಥೀಯ ಗುಂಪೊಂದು ಪವಿತ್ರ ಕುರ್ ಆನ್ ಅನ್ನು ಸುಟ್ಟುಹಾಕಿದ್ದರಿಂದ ಉಂಟಾದ ಗಲಭೆ ಮತ್ತು ಪ್ರತಿಭಟನೆ ಸ್ವೀಡನ್ ನ ಹಲವು ನಗರಗಳಲ್ಲಿ ಸತತ ನಾಲ್ಕನೇ ದಿನವೂ ಮುಂದುವರಿದಿದೆ.

- Advertisement -

ಏತನ್ಮಧ್ಯೆ, ಸ್ಟ್ರಾಮ್ ಕುರ್ಸ್ ಅಥವಾ ಹಾರ್ಡ್ ಲೈನ್ ಪಕ್ಷದ ನೇತೃತ್ವ ವಹಿಸಿದ 40 ವರ್ಷದ ಡ್ಯಾನಿಷ್-ಸ್ವೀಡಿಷ್ ತೀವ್ರಗಾಮಿ ರಾಸ್ಮಸ್ ಪಲುಡಾನ್ ತಾನು ಇಸ್ಲಾಮಿನ ಅತ್ಯಂತ ಪವಿತ್ರ ಗ್ರಂಥವನ್ನು ಸುಟ್ಟುಹಾಕಿದ್ದೇನೆ ಮತ್ತು ಅದನ್ನು ಪುನಾರಾವರ್ತಿಸುತ್ತೇನೆ ಎಂದು ಘೋಷಿಸಿದ್ದಾನೆ ಎನ್ನಲಾಗಿದೆ

ಸ್ವೀಡನ್ ನ ನಾರ್ಕೊಪಿಂಗ್ ನಗರದಲ್ಲಿ ಭಾನುವಾರ ಮೂವರು ಗಲಭೆಕೋರರಿಗೆ ಪೊಲೀಸ್ ಗುಂಡೇಟು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಮೂವರನ್ನು ಅಪರಾಧದ ಶಂಕೆಯ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದು, ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ.

- Advertisement -

ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು ಕನಿಷ್ಠ 17 ಜನರನ್ನು ಬಂಧಿಸಲಾಗಿದೆ. ದಕ್ಷಿಣ ನಗರ ಮಾಲ್ಮೋದಲ್ಲಿ ಬಲಪಂಥೀಯ ರಾಲಿ ಸಮಯದಲ್ಲಿ ಬಸ್ ಸೇರಿದಂತೆ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಪ್ರಾದೇಶಿಕ ಮಾಧ್ಯಮಗಳು ವರದಿ ಮಾಡಿವೆ.

ಕುರ್ ಆನ್ ಅನ್ನು ಸುಡುವ ಸ್ಟ್ರಾಮ್ ಕುರ್ಸ್ ನ ಯೋಜನೆಗಳ ವಿರುದ್ಧ ಸ್ವೀಡನ್ ನಲ್ಲಿ ಈ ಹಿಂದೆ ಪ್ರತಿಭಟನೆಗಳು ನಡೆದಿದ್ದು, ನಾಲ್ಕನೇ ದಿನವೂ ಅದು ಮುಂದುವರಿದಿದೆ.

Join Whatsapp