ನಿಲ್ಲದ ‘ಅಗ್ನಿಪಥ್’ ವಿರುದ್ಧ ಪ್ರತಿಭಟನೆ : ಬಿಹಾರ, ಉತ್ತರ ಪ್ರದೇಶದಲ್ಲಿ ರೈಲುಗಳಿಗೆ ಬೆಂಕಿ

Prasthutha|

ನವದೆಹಲಿ: ಕೇಂದ್ರದ ಅಗ್ನಿಪಥ್ ಯೋಜನೆ ವಿರುದ್ಧ ಮೂರನೇ ದಿನವೂ ಪ್ರತಿಭಟನೆ ಮುಂದುವರಿಸಿರುವ ಪ್ರತಿಭಟನಕಾರರು, ಶುಕ್ರವಾರ ಬೆಳಿಗ್ಗೆ ಸಮಸ್ತಿಪುರದ ಮೊಹಿಯುದ್ದೀನ್ ನಗರದಲ್ಲಿ ರೈಲಿನ ಆರು ಬೋಗಿಗಳಿಗೆ ಮತ್ತು ಲಖಿಸರಾಯ್ ನಿಲ್ದಾಣದಲ್ಲಿ ಮತ್ತೊಂದು ರೈಲಿನ ಎರಡು ಬೋಗಿಗಳಿಗೆ ಬೆಂಕಿ ಹಚ್ಚಿದ್ದಾರೆ.

- Advertisement -

ಪ್ರತಿಭಟನಕಾರರು ಬೋಗಿಗಳಿಗೆ ಬೆಂಕಿ ಹಚ್ಚುವ ಮೊದಲು ಪ್ರಯಾಣಿಕರನ್ನು ಇಳಿಸಿದ್ದರಿಂದ ಯಾರಿಗೂ ಗಾಯಗಳಾಗಿಲ್ಲ. ಆದಾಗ್ಯೂ, ಪಾಟ್ನಾ-ಹೌರಾ ಮತ್ತು ಪಾಟ್ನಾ-ಭಾಗಲ್ಪುರ ಮಾರ್ಗಗಳಲ್ಲಿ ಅರ್ಧ ಡಜನ್ ಗೂ  ಹೆಚ್ಚು ರೈಲುಗಳ ಸಂಚಾರ ವಿಳಂಬವಾಗಿವೆ. ಗುಂಪನ್ನು ಚದುರಿಸಲು ನಿಲ್ದಾಣದಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

“ಬೆಳಿಗ್ಗೆಯಿಂದ ನಿಲ್ದಾಣದಲ್ಲಿ ಪಡೆಗಳನ್ನು ನಿಯೋಜಿಸಲಾಗಿದೆ. ಕೆಲವು ಪ್ರತಿಭಟನಕಾರರು ಅಲ್ಲಿಗೆ ತಲುಪಿದರು. ಆದರೆ ಅವರನ್ನು ಹೆಚ್ಚು ಹಾನಿ ಮಾಡದಂತೆ ತಡೆಯಲಾಯಿತು. ಅವರು ಕಲ್ಲು ತೂರಾಟಕ್ಕೆ ಯತ್ನಿಸಿದರು. ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಡಿಎಂ ಸೌಮ್ಯ ಅಗರ್ವಾಲ್ ಸುದ್ದಿಗಾರರಿಗೆ ತಿಳಿಸಿದರು.

Join Whatsapp