ನವದೆಹಲಿ: ನವದೆಹಲಿಯ ಶಾಹೀನ್ ಬಾಗ್ ನಲ್ಲಿ ಮುನ್ಸಿಪಲ್ ಪಾಲಿಕೆಯ ಅತಿಕ್ರಮಣ ವಿರೋಧಿ ಅಭಿಯಾನ ಆರಂಭಿಸಿದ್ದು, ಅಕ್ರಮದ ಹೆಸರಿನಲ್ಲಿ ಕಟ್ಟಡಗಳನ್ನು ಕೆಡವಲು ಮುಂದಾಗಿದೆ. ಇದನ್ನು ವಿರೋಧಿಸಿ ಬುಲ್ಡೋಝರ್ ತಡೆದು ಪ್ರತಿಭಟಿಸಿದ ನಾಗರಿಕರನ್ನು ಪೊಲೀಸರು ಬಂಧಿಸಿದ್ದಾರೆ.
ಪಾಲಿಕೆಯ ಧ್ವಂಸ ಕಾರ್ಯಾಚರಣೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ, ಸ್ಥಳೀಯ ನಾಗರಿಕರು ಸೇರಿಕೊಂಡು ಪ್ರತಿಭಟನೆ ನಡೆಸಿದ್ದಾರೆ.
ಜೆಸಿಬಿ ಬುಲ್ಡೋಝರ್ ಎದುರು ಕುಳಿತಿದ್ದ ಮಹಿಳೆಯರು ಸೇರಿದಂತೆ ಪ್ರತಿಭಟನಾಕಾರರನ್ನು ಪಾಲಿಕೆ ಸಿಬ್ಬಂದಿಗಳು ಬಲವಂತವಾಗಿ ಹೊರದಬ್ಬಿದ್ದಾರೆ.
ಪ್ರತಿಭಟನಾಕಾರರು ಜೆಸಿಬಿ ಬುಲ್ಡೋಝರ್ ಮೇಲೆ ನಿಂತಾಗ, ಚಾಲಕ ಅವರು ಹತ್ತುವುದನ್ನು ತಡೆಯಲು ಅದನ್ನು ನೆಲದಿಂದ ಮೇಲಕ್ಕೆತ್ತಿದ್ದಾರೆ.
ಸ್ಥಳದಲ್ಲಿ ಹೆಚ್ಚಿನ ಪೊಲೀಸರು ಮತ್ತು ಪ್ಯಾರಾ ಮಿಲಿಟರಿ ಪಡೆಗಳು ಈ ಪ್ರದೇಶದಲ್ಲಿ ಮೊಕ್ಕಾಂ ಹೂಡಿದೆ.