ಶ್ರೀಲಂಕಾ ಪ್ರಧಾನಿ ನಿವಾಸದಲ್ಲಿ ಪ್ರತಿಭಟನಕಾರರಿಂದ ಕೇರಂ ಆಟ, ಭರ್ಜರಿ ಅಡುಗೆ

Prasthutha|

ಕೊಲಂಬೊ: ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಅಧಿಕೃತ ನಿವಾಸ ‘ಟೆಂಪಲ್ ಟ್ರೀ’ ಗೆ ನುಗ್ಗಿರುವ ಪ್ರತಿಭಟನಕಾರರುನಿವಾಸದ ಆವರಣದಲ್ಲಿ ಅಡುಗೆ ಮಾಡಿ ಕೇರಂ ಆಟ ಆಡುತ್ತಿದ್ದಾರೆ.

- Advertisement -

ನಾವು ಪ್ರಧಾನಿ ಮನೆಯೊಳಗಿದ್ದೇವೆ. ಅಡುಗೆ ಮಾಡಲು ಪ್ರಾರಂಭಿಸಿದ್ದೇವೆ. ಪಿಎಂ ವಿಕ್ರಮಸಿಂಘೆ ಮತ್ತು ಅಧ್ಯಕ್ಷ ರಾಜಪಕ್ಸ ರಾಜೀನಾಮೆಗಾಗಿ ಹೋರಾಟ ಮಾಡಿದ್ದೇವೆ. ಅವರು ರಾಜೀನಾಮೆ ನೀಡಿದಾಗ ಮಾತ್ರ ನಾವು ಆವರಣವನ್ನು ತೊರೆಯುತ್ತೇವೆ” ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಅಲ್ಲದೆ, ಪ್ರಧಾನಿ ರನಿಲ್ ವಿಕ್ರಮಸಿಂಗ್ ಅವರ ಖಾಸಗಿ ನಿವಾಸಕ್ಕೂ ಪ್ರತಿಭಟನಕಾರರು ಬೆಂಕಿ ಹಚ್ಚಿದ್ದಾರೆ.

Join Whatsapp