ಕಾಣಿಯೂರು ಘಟನೆ ಖಂಡಿಸಿ ನಾಳೆ ಪ್ರತಿಭಟನೆ: ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯಿಂದ ಬೆಂಬಲ

Prasthutha|

ಪುತ್ತೂರು: ಕಾಣಿಯೂರಿನಲ್ಲಿ ಸಂಘಪರಿವಾರದ ದುಷ್ಕರ್ಮಿಗಳು ಮುಸ್ಲಿಂ ಬೆಡ್‌ಶೀಟ್ ವ್ಯಾಪಾರಿಗಳ ಮೇಲೆ ಅಮಾನವೀಯ ಗುಂಪು ಹಲ್ಲೆ ಹಾಗೂ ಕೊಲೆಯತ್ನ ಪ್ರಕರಣವನ್ನು ಖಂಡಿಸಿ ದ.ಕ ಮುಸ್ಲಿಂ ಯುವಜನ ಪರಿಷತ್, ಪುತ್ತೂರು ವತಿಯಿಂದ ನಾಳೆ ನಡೆಯುವ SDPI ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

- Advertisement -

ಮುಸ್ಲಿಮ್ ವ್ಯಾಪಾರಿಗಳ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆಯನ್ನು ಖಂಡಿಸಿ ದ.ಕ ಮುಸ್ಲಿಂ ಯುವಜನ ಪರಿಷತ್, ಪುತ್ತೂರು ವತಿಯಿಂದ ನಾಳೆ ಸಂಜೆ 3 ಗಂಟೆಗೆ ದರ್ಬೆ ವೃತ್ತದಿಂದ ಎಸಿ ಕಛೇರಿ ತನಕ ಬೃಹತ್ ಪ್ರತಿಭಟನಾ ರ‍್ಯಾಲಿಯನ್ನು ಹಮ್ಮಿಕೊಂಡಿದೆ. ಈ ಪ್ರತಿಭಟನಾ ರ‍್ಯಾಲಿಗೆ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಸಂಪೂರ್ಣ ಬೆಂಬಲ ಸೂಚಿಸಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

Join Whatsapp