15 ಕೆ.ಜಿ ಅಕ್ಕಿ ನೀಡದಿದ್ದರೆ ಸದನದ ಒಳಗೆ ಹೊರಗೆ ಪ್ರತಿಭಟನೆ: ಮಾಜಿ ಸಿಎಂ ಬೊಮ್ಮಾಯಿ

Prasthutha|

ಬೆಂಗಳೂರು: ಅಕ್ಕಿ ಸೇರಿದಂತೆ ಗ್ಯಾರಂಟಿಗಳ ಗೊಂದಲ, ಸರ್ಕಾರದ ವೈಫಲ್ಯದ ವಿರುದ್ಧ ಸದನದ ಒಳಗೆ, ಹೊರಗೆ ಪ್ರತಿಭಟನೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

- Advertisement -


ಕೇಂದ್ರದ 5 ಕೆ.ಜಿ ಅಕ್ಕಿ ಜತೆಗೆ ನೀವು ನೀಡಿದ್ದ ಗ್ಯಾರಂಟಿ ಭರವಸೆಯಂತೆ ಒಟ್ಟು 15 ಕೆ.ಜಿ ಅಕ್ಕಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲು ಹೊರಟ ನಮ್ಮನ್ನು ವಶಕ್ಕೆ ಪಡೆದು ನಮ್ಮ ಹೋರಾಟ ದಮನ ಮಾಡುತ್ತಿದ್ದಾರೆ. ಪೊಲೀಸ್ ರಾಜ್ಯ ಮಾಡಲು ಹೊರಟಿದ್ದೀರಾ?. ನಿಮ್ಮ ಪೊಲೀಸ್ ರಾಜ್ಯ ಎಷ್ಟು ದಿನ ಇರುತ್ತದೆ ನೋಡೋಣ. ಪೊಲೀಸ್ ಬಲವೋ, ನಮ್ಮ ರಟ್ಟೆಯ ಬಲವೋ ನೋಡೋಣ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಬೊಮ್ಮಾಯಿ ಸವಾಲು ಹಾಕಿದ್ದಾರೆ.


ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಅಕ್ಕಿ ಇಲ್ಲ ಅಂತ ಗೊತ್ತಿತ್ತು. ಆದರೂ ಯಾಕೆ ಅಕ್ಕಿ ಕೊಡುತ್ತೇವೆ ಎಂದರು?. ಆಗ ತಯಾರಿ ಮಾಡಿಕೊಳ್ಳಲಿಲ್ಲ, ಈಗ ಕೇಂದ್ರ ಅಕ್ಕಿ ಕೊಡಲಿಲ್ಲ ಎನ್ನುತ್ತಿದ್ದೀರಿ. ಹೆಚ್ಚುವರಿ ಅಕ್ಕಿ ಬೇಕು ಎಂದರೆ ಮುಕ್ತ ಮಾರುಕಟ್ಟೆಯಲ್ಲಿ ಖರಿದಿ ಮಾಡಬೇಕು. ನಿಮಗೆ ತಾಕತ್ತು, ದಮ್ಮು ಇದ್ದರೆ ಎಲ್ಲಾ ಕಡೆ ಕೇಂದ್ರದ 5 ಕೆ.ಜಿ ಜೊತೆ ನಿಮ್ಮ ಗ್ಯಾರಂಟಿಯ 10 ಕೆ.ಜಿ ಭರವಸೆ ಸೇರಿ 15 ಕೆ.ಜಿ ಅಕ್ಕಿ ಕೊಡಬೇಕು. ಒಂದು ಮನೆಯಲ್ಲಿ 5 ಜನರಿದ್ದರೆ 75 ಕೆ.ಜಿ ಅಕ್ಕಿ ಕೊಡಬೇಕು ಎಂದು ಆಗ್ರಹಿಸಿದರು.