ಆರೆಸ್ಸೆಸ್ ಶಾಖೆಗಳಿಗೆ ಸಂರಕ್ಷಣೆ; ವಿವಾದಕ್ಕೀಡಾದ ಕೇರಳದ ಕಾಂಗ್ರೆಸ್ ನಾಯಕನ ಮಾತುಗಳು

Prasthutha|

ಕಣ್ಣೂರು: ಕೇರಳದಲ್ಲಿ ಆರೆಸ್ಸೆಸ್ ತನ್ನ ಶಾಖೆಗಳನ್ನು ಆರಂಭಿಸಿದಾಗ ಸಿಪಿಎಂ ಈ ಶಾಖೆಗಳ ನಾಶಕ್ಕೆ ಯತ್ನಿಸಿತ್ತು. ಈ ವೇಳೆ ಜನರನ್ನು ಕಳುಹಿಸಿ ಈ ಶಾಖೆಗಳಿಗೆ ನಾವು ಸಂರಕ್ಷಣೆ ಕೊಟ್ಟಿದ್ದೆವು ಎಂದು ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ನೀಡಿರುವ ಹೇಳಿಕೆ ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ.

- Advertisement -


ಕಣ್ಣೂರಿನಲ್ಲಿ ಎಂವಿಆರ್ ಸ್ಮರಣಾರ್ಥ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತಾಡಿದ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರನ್, ಶಾಖೆಯ ಬಗ್ಗೆಯಾಗಲಿ ಆರೆಸ್ಸೆಸ್ ನೊಂದಿಗಾಗಲಿ ಯಾವುದೇ ಒಲವು ಇರಲಿಲ್ಲ. ಆದರೆ, ಒಂದು ಮೂಲಭೂತ ಹಕ್ಕನ್ನು ನಾಶ ಮಾಡುವುದನ್ನು ನೋಡಿ ನಿಲ್ಲುವುದು ಪ್ರಜಾಪ್ರಭುತ್ವದ ನಂಬಿಕೆಗೆ ಸೂಕ್ತ ಅಲ್ಲ ಅಂತ ಅನ್ನಿಸಿದ್ದರಿಂದ ಸಂರಕ್ಷಣೆ ನೀಡಿದ್ದೇವೆ. ಆದರೆ, ಆರೆಸ್ಸೆಸ್‍ ಚಟುವಟಿಕೆಗಳಿಗೆ ಎಂದೂ ಬೆಂಬಲ ನೀಡಿಲ್ಲ ಎಂದು ಹೇಳಿದ್ದಾರೆ.

- Advertisement -


ಅಭಿವ್ಯಕ್ತಿ ಸ್ವಾತಂತ್ರ್ಯ ನೆಲೆ ನಿಲ್ಲುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಈ ನಾಡಿನ ಸಾಮಾಜಿಕ, ಆರ್ಥಿಕ, ಸುರಕ್ಷೆ ಹಾಗೂ ಜಾತ್ಯತೀತತೆಗೆ ಹಾನಿಯಾಗದಂತೆ ಮಾಡುವ ಯಾವುದೇ ಕೆಲಸವನ್ನೂ ಸಂರಕ್ಷಿಸಬೇಕೆಂಬುದು ಅಂದಿನ ತೀರ್ಮಾನಕ್ಕೆ ಪ್ರೇರಣೆಯಾಗಿತ್ತು. ಇದು ಸರಿಯಾ ತಪ್ಪಾ ಎಂಬುದು ಚರ್ಚೆಯಾಗಲಿ ಎಂದು ಸುಧಾಕರನ್ ಹೇಳಿದರು.

Join Whatsapp