ಬೆಂಗಳೂರು ನಗರಗಳಲ್ಲಿ ಹೆಚ್ಚುತ್ತಿರುವ ಪ್ರಾಸ್ಟೇಟ್ ಕ್ಯಾನ್ಸರ್

Prasthutha|

ಬೆಂಗಳೂರು: ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಮೂತ್ರನಾಳದ ಕ್ಯಾನ್ಸರ್ ಪ್ರಕರಣಗಳ ಹರಡುವಿಕೆ ಪ್ರಮಾಣ ಹೆಚ್ಚುತ್ತಿದೆ ಮತ್ತು ಪ್ರಸ್ತುತ ದೇಶದಲ್ಲಿ ಕಾಣಿಸಿಕೊಳ್ಳುತ್ತಿರುವ ಎಲ್ಲಾ ಕ್ಯಾನ್ಸರ್ ಗಳಿಗೆ ಹೋಲಿಸಿದರೆ ಈ ಮೂತ್ರನಾಳದ ಕ್ಯಾನ್ಸರ್ ಪ್ರಮಾಣ ಶೇ.15 ರಿಂದ 20 ರಷ್ಟು ಇದೆ.

- Advertisement -

 ವಿಶೇಷವಾಗಿ ಮಹಿಳೆಯರಿಗಿಂತ ಪುರುಷರಲ್ಲಿ ಈ ರೋಗ ಹೆಚ್ಚಾಗಿ ಪರಿಣಾಮ ಬೀರುತ್ತಿದೆ ಮತ್ತು ಈ ಪ್ರಾಸ್ಟೇಟ್ ಕ್ಯಾನ್ಸರ್ ನಗರ ಪ್ರದೇಶದ ಜನರಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ದೆಹಲಿ, ಪುಣೆ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಕಳೆದ ಕೆಲವು ವರ್ಷಗಳಿಂದೀಚೆಗೆ ಈ ಪ್ರಾಸ್ಟೇಟ್ ಕ್ಯಾನ್ಸರ್ ನಾಲ್ಕನೇ ಸ್ಥಾನದಿಂದ ಎರಡನೇ ಸ್ಥಾನಕ್ಕೇರಿರುವುದು ಆತಂಕ ತಂದೊಡ್ಡಿದೆ.

ಬೆಂಗಳೂರಿನಲ್ಲಿ ಸೊಸೈಟಿ ಆಫ್ ಜೆನಿಟೋರಿನರಿ ಆಂಕಾಲಾಜಿಸ್ಟ್ (SOGO) ಆಯೋಜಿಸಿರುವ ಮೊದಲ SOGOCON 2022 ಸಮ್ಮೇಳನದಲ್ಲಿ ಪಾಲ್ಗೊಂಡಿರುವ ಯೋರೋ-ಆಂಕಾಲಾಜಿ ಪರಿಣತರು ಈ ಆತಂಕಕಾರಿ ಅಂಶವನ್ನು ಹೊರಹಾಕಿದ್ದಾರೆ.

- Advertisement -

ಈ ಮೂರು ದಿನಗಳ ಕಾರ್ಯಕ್ರಮ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಪುರುಷ ಮತ್ತು ಸ್ತ್ರೀ ಮೂತ್ರನಾಳ ಮತ್ತು ಪುರುಷ ಸಂತಾನೋತ್ಪತ್ತಿ ಅಂಗಗಳ ಕ್ಯಾನ್ಸರ್ ಗಳೊಂದಿಗೆ ವ್ಯವಹರಿಸುವ ಯೂರೋ-ಆಂಕಾಲಜಿ ಅಭ್ಯಾಸವನ್ನು ಉತ್ತೇಜಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಗ್ಲೋಬಲ್ ಹೆಲ್ತ್ ಅಕಾಡೆಮಿಯ ಸಹಯೋಗದಲ್ಲಿ ಎಸ್ಒಜಿಒ ಈ ಸಮ್ಮೇಳನವನ್ನು ಆಯೋಜಿಸಿದ್ದು, ಇದರಲ್ಲಿ ದೇಶ, ವಿದೇಶಗಳ 300 ಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದಾರೆ.

ಎಚ್ ಸಿಜಿ ಕ್ಯಾನ್ಸರ್ ಆಸ್ಪತ್ರೆ, SOGOCON 2022 ರ ಸಂಘಟನಾ ಕಾರ್ಯದರ್ಶಿ ಡಾ.ರಘುನಾಥ್ ಎಸ್. ಕೆ.ಮಾತನಾಡಿ, “ಇತರೆ ಕ್ಯಾನ್ಸರ್ ಗಳಿಗೆ ಹೋಲಿಸಿದರೆ ಈ ಪ್ರಾಸ್ಟೇಟ್ ಮೂತ್ರಕೋಶ ಕ್ಯಾನ್ಸರ್ ವಿಶಿಷ್ಟವಾಗಿದೆ. ಇದು ಗ್ರಾಮೀಣ ಪ್ರದೇಶದ ಜನರಿಗಿಂತ ಹೆಚ್ಚಾಗಿ ನಗರ ಪ್ರದೇಶದ ಜನರಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಅಲ್ಲದೇ, ನಗರಗಳಲ್ಲಿ ವಾಸಿಸುತ್ತಿರುವ ಜನರಲ್ಲಿ ಈ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚುತ್ತಿದೆ. ಭಾರತದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ಪತ್ತೆಯಾಗಿರುವ ಎಲ್ಲಾ ರೋಗಿಗಳಲ್ಲಿ ಶೇ.65 ರಷ್ಟು ಜನರು ಈ ರೋಗದಿಂದ ಸಾವನ್ನಪ್ಪುತ್ತಿದ್ದಾರೆ. ಆಸ್ಟ್ರೇಲಿಯಾ ಮತ್ತು ಯುಎಸ್ ನಂತಹ ದೇಶಗಳಲ್ಲಿ ಈ ಅಂಕಿಅಂಶವು ಕೇವಲ ಶೇ.12 ರಷ್ಟಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಈ ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ಅರಿವಿನ ಕೊರತೆ ಇರುವುದು. ಈ ಅರಿವಿನ ಕೊರತೆಯಿಂದಾಗಿ ಜನರು ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ತಡವಾಗಿ ಪತ್ತೆ ಮಾಡಿಸಿಕೊಳ್ಳುತ್ತಿದ್ದಾರೆ. ಜೀವನ ಶೈಲಿ, ನಾವು ಸೇವಿಸುವ ಆಹಾರ, ಒತ್ತಡ, ಮಾಲಿನ್ಯ, ವ್ಯಾಯಾಮದ ಕೊರತೆ ಹಾಗೂ ತಡವಾಗಿ ಕೆಲಸ ಮಾಡುವುದರಿಂದ ಮೂತ್ರನಾಳದ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತಿದೆ. ಇದು ಭಾರತದಲ್ಲಿ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಹೆಚ್ಚು ಹೆಚ್ಚು ಕಾಲ ಕೆಲಸ ಮಾಡುವುದು, ರಾಸಾಯನಿಕರಗಳಿಗೆ ನಮ್ಮನ್ನು ಒಡ್ಡಿಕೊಳ್ಳುವುದರ ಜೊತೆಗೆ ತಡವಾದ ರೋಗನಿರ್ಣಯದೊಂದಿಗೆ ಅನಾರೋಗ್ಯ ಮತ್ತು ಮರಣದ ವಿಷಯದಲ್ಲಿ ಭಾರತೀಯರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡುವಂತೆ ಮಾಡಿದೆ’ಎಂದರು.

ಎಚ್ ಸಿಜಿ ಕ್ಯಾನ್ಸರ್ ಆಸ್ಪತ್ರೆಯ, SOGOCON 2022 ಅಧ್ಯಕ್ಷ ಡಾ.ಶೇಖರ್ ಪಾಟೀಲ್  ಮಾತನಾಡಿ, “ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಮೂಲಕ ನಾವು ವಿವಿಧ ವಿಧಾನಗಳಿಂದ ಮರಣ ಮತ್ತು ರೋಗವನ್ನು ಕಡಿಮೆ ಮಾಡಬಹುದು. ನಿಯಮಿತ ಆರೋಗ್ಯ ತಪಾಸಣೆಯ ಮೂಲಕ ಜಾಗೃತಿ ಮೂಡಿಸಲು ಹಾಗೂ ಆರಂಭಿಕ ಪತ್ತೆಯನ್ನು ಉತ್ತೇಜಿಸಲು ಸರ್ಕಾರವು ಆಸ್ಪತ್ರೆಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿರಬೇಕು. ವೈದ್ಯರು ಆರಂಭಿಕ ಹಂತದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ನಲ್ಲಿ ಶಸ್ತ್ರಚಿಕಿತ್ಸೆಯನ್ನು ನಡೆಸಿದಾಗ ಸಂಬಂಧಿತ ರೋಗ ಮತ್ತು ಮರಣ ಪ್ರಮಾಣವು ತುಂಬಾ ಕಡಿಮೆಯಾಗಿದೆ ಎಂದು ತಿಳಿಸಿದರು.



Join Whatsapp