ಪ್ರವಾದಿ ನಿಂದನೆ: ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಸೇರಿದಂತೆ 38 ತಪ್ಪಿತಸ್ಥ ನಾಯಕರ ಪೈಕಿ 27 ಮಂದಿಗೆ ಬಿಜೆಪಿ ಎಚ್ಚರಿಕೆ

Prasthutha|

ನವದೆಹಲಿ:  ಪ್ರವಾದಿ ಮುಹಮ್ಮದ್ ರ ಕುರಿತು ಅವಹೇಳನಕಾರಿ ಹೇಳಿಕೆಗಾಗಿ  ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ  ಉಂಟಾದ ಅವಮಾನದ ಬಳಿಕ ಎಚ್ಚೆತ್ತುಕೊಂಡಿರುವ ಆಡಳಿತಾರೂಢ ಬಿಜೆಪಿಯು ಹಾನಿ ನಿಯಂತ್ರಣಕ್ಕೆ ಮತ್ತು ತಪ್ಪನ್ನು ತಿದ್ದಿಕೊಳ್ಳಲು ಮುಂದಾಗಿದೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ.

- Advertisement -

ಕಳೆದ ಎಂಟು ವರ್ಷಗಳಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದ ನಾಯಕರ ಪಟ್ಟಿಯನ್ನು ಸಿದ್ಧಪಡಿಸುವಂತೆ ಬಿಜೆಪಿಯ ಉನ್ನತ ನಾಯಕತ್ವವು ತನ್ನ ಸಂಶೋಧನಾ ಘಟಕಕ್ಕೆ ನಿರ್ದೇಶ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಪರಿಶೀಲನೆಯಲ್ಲಿ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಮತ್ತು ಅನಂತ್ ಕುಮಾರ್ ಹೆಗಡೆ ಸೇರಿದಂತೆ ತನ್ನ 38 ನಾಯಕರನ್ನು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವವರೆಂದು ಬಿಜೆಪಿ ಗುರುತಿಸಿದೆ .ಈ ಪೈಕಿ 27 ಚುನಾಯಿತ ನಾಯಕರಿಗೆ ಇಂತಹ ಹೇಳಿಕೆ ನೀಡದಂತೆ ಸೂಚನೆ ನೀಡಲಾಗಿದ್ದು, ಧಾರ್ಮಿಕ ವಿಚಾರಗಳ ಕುರಿತು ಹೇಳಿಕೆ ನೀಡುವ ಮುನ್ನ ಪಕ್ಷದಿಂದ ಅನುಮತಿ ಪಡೆಯುವಂತೆ ಸೂಚಿಸಲಾಗಿದೆ.

- Advertisement -

ತಪ್ಪಿತಸ್ಥರೆಂದು ಗುರುತಿಸಲ್ಪಟ್ಟವರಲ್ಲಿ ಅನಂತಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ, ಗಿರಿರಾಜ ಸಿಂಗ್, ತಥಾಗತ ರಾಯ್, ವಿನಯ ಕಟಿಯಾರ್, ಮಹೇಶ ಶರ್ಮಾ, ರಾಜಾ ಸಿಂಗ್,ಸಾಕ್ಷಿ ಮಹಾರಾಜ ಮತ್ತು ಸಂಗೀತ ಸೋಮ್ ಸೇರಿದ್ದಾರೆ.



Join Whatsapp